ಬುಧವಾರ, ಏಪ್ರಿಲ್ 14, 2021
24 °C

ಆಶ್ರಮದ ಚಿಂತನೆ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಧುತ್ತರಗಾಂವ ಗ್ರಾಮದ ವೀರೇಶ್ವರ ಗುರುಕುಲಾಶ್ರಮದ ಲಿಂ.ಚನ್ನಬಸವ ಸ್ವಾಮಿ ಮತ್ತು ಇಂದಿನ ವಿಶ್ವನಾಥ ಸ್ವಾಮೀಜಿಗಳ ಸಮಾಜಮುಖಿಯಾದ ಚಿಂತನೆಗಳು ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪ್ರಸ್ತುತವಾಗಿವೆ ಎಂದು ಶಾಸಕ ಸುಭಾಷ ಆರ್. ಗುತ್ತೇದಾರ ಮಠದ ಕಾರ್ಯಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲ್ಲೂಕಿನ ಧುತ್ತರಗಾಂವ ವೀರೇಶ್ವರ ಗುರುಕುಲಾಶ್ರಮದಲ್ಲಿ ಶುಕ್ರವಾರ ಲಿಂ. ಚನ್ನಬಸವ ಸ್ವಾಮೀಜಿಗಳ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಗದಗ-ಡಂಬಳ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ ಇಂದಿನ ಪೀಠಾಧಿಪತಿ ವಿಶ್ವನಾಥ ಸ್ವಾಮೀಜಿ ಬಸವಾದಿ ಶರಣರ ವಿಚಾರಗಳನ್ನು ತೌಲನಿಕವಾಗಿ ಅಭ್ಯಾಸ ಮಾಡಿದವರು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿಚಾರಗಳೊಂದಿಗೆ ದೇಶಾದ್ಯಂತ ಲಿಂಗಾಯತ ಧರ್ಮದ ಪ್ರಸಾರದಲ್ಲಿ ನಿರಂತರವಾಗಿ ತೊಡಗಿದ್ದಾರೆ ಎಂದರು.ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪೂರೆ, ಉಪನ್ಯಾಸಕ ಸಂಜಯ ಮಾಕಲ್, ಸಮಾಜದಲ್ಲಿ ಬೇರೂರಿದ ಮೌಢ್ಯತೆ ಮತ್ತು ಧಾರ್ಮಿಕ ಕಂದಾಚಾರಗಳನ್ನು ಹೋಗಲಾಡಿಸಲು ಮಠಗಳು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಯಲಗುಂಡದ ಗುರುಲಿಂಗ ಸ್ವಾಮಿ, ಮುಳಗುಂದದ ಅತಿಥಿ ಬಸವ ಸ್ವಾಮಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ ಕಾರ್ಯಕ್ರಮ ಉದ್ಘಾಟಿಸಿದರು. ಹಿರೋಳಿ ಶಿವಬಸವ ಸ್ವಾಮಿ, ದಲಿತ ಮುಖಂಡ ದಯಾನಂದ ಶೇರಿಕಾರ, ಬಸವಕೇಂದ್ರದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಕಾರಬಾರಿ, ರಮೇಶ ಲೋಹಾರ, ಡಾ. ಎಸ್.ಎ.ಕೊಗನೂರೆ, ಮಹಾದೇವಪ್ಪ ಕಣ್ಣಿ, ಬಾಬುರಾವ ಸುಳ್ಳದ ಇತರರಿದ್ದರು. ಶರಣು ಮಲಶೆಟ್ಟಿ ನಿರೂಪಿಸಿದರು. ಅಮರಸ್ವಾಮಿರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.