ಆಶ್ರಯ ಒಲ್ಲದ ಮುಬಾರಕ್

7

ಆಶ್ರಯ ಒಲ್ಲದ ಮುಬಾರಕ್

Published:
Updated:

ಕೈರೊ (ಪಿಟಿಐ): ಜನಾಂದೋಲನಕ್ಕೆ ಮಣಿದು ಅಧ್ಯಕ್ಷ ಪದವಿಯಿಂದ ಕೆಳಗಿಳಿದ ಹೋಸ್ನಿ ಮುಬಾರಕ್ ನೆರೆ ರಾಷ್ಟ್ರಗಳು ನೀಡಿರುವ ರಾಜಕೀಯ ಆಶ್ರಯದ ಪ್ರಸ್ತಾವವನ್ನು ತಿರಸ್ಕರಿಸಿದ್ದು, ತಾಯ್ನಾಡಿನಲ್ಲಿಯೇ ಕೊನೆಯುಸಿರೆಳೆಯಲು ಬಯಸಿರುವುದಾಗಿ ತಿಳಿಸಿದ್ದಾರೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.82 ವರ್ಷ ವಯಸ್ಸಿನ ಮುಬಾರಕ್ ಆರೋಗ್ಯ ಹದಗೆಟ್ಟಿರುವುದರಿಂದ ಅವರು ದೇಶ ಬಿಟ್ಟು ಬರಲು ಒಪ್ಪುತ್ತಿಲ್ಲ ಎಂದು ಸೌದಿ ಅಧಿಕಾರಿಗಳು ಅಮೆರಿಕದ ಸಿಬಿಎಸ್ ನೆಟ್‌ವರ್ಕ್‌ಗೆ ತಿಳಿಸಿದ್ದಾರೆ.

ಸೌದಿ ಅರೇಬಿಯಾಕ್ಕೆ ಬಂದು ನೆಲಸುವಂತೆ ಅಧಿಕಾರಿಗಳು ಕೋರಿದ್ದರು. ಆದರೆ ಸಾಯುವುದಾದರೆ ತಾಯ್ನಾಡಿನಲ್ಲಿಯೇ ಸಾಯಲು ಬಯಸುತ್ತೇನೆ ಎಂದು ಮುಬಾರಕ್ ತಿಳಿಸಿದ್ದಾರೆ.

ಅಧಿಕಾರ ತ್ಯಜಿಸಿ ರೆಸಾರ್ಟ್‌ಗೆ ತೆರಳಿದ ನಂತರ ಮುಬಾರಕ್ ಅವರ ಆರೋಗ್ಯ ತೀರಾ ಹದಗೆಟ್ಟು ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಈಜಿಪ್ಟ್‌ನ ಅನೇಕ ಪತ್ರಿಕೆಗಳು ವರದಿ ಮಾಡಿವೆ.ಆದರೆ ಸರ್ಕಾರದ ಪರ ಇರುವ ಪತ್ರಿಕೆಗಳು ಈ ವರದಿಯನ್ನು ಅಲ್ಲಗಳೆದಿದ್ದು, ಮುಬಾರಕ್ ಅವರು ಮಾನಸಿಕವಾಗಿ ನಿತ್ರಾಣಗೊಂಡು ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry