ಬುಧವಾರ, ಜೂನ್ 23, 2021
23 °C

ಆಶ್ರಯ ಮನೆಗಾಗಿ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶ್ರಯ ಯೋಜನೆಯಡಿ ಆಶ್ರಯ ಮನೆಯನ್ನು ನೀಡಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನಾ ಆಶ್ರಯದಲ್ಲಿ ಮಹಿಳೆಯರು ಮಹಾನಗರ ಪಾಲಿಕೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜನವಾದಿ ಮಹಿಳಾ ಸಂಘಟನೆಯ ಸದಸ್ಯರ ಸಂಯೋಜಕ ಶಂಕರಗೌಡ ದೇಸಾಯಿ, “672 ಆಶ್ರಯ ಮನೆಗಳನ್ನು ಮಂಜೂರು ಮಾಡಿಸುವಂತೆ ಒತ್ತಾಯಿಸಿ ಜನವರಿ 1, 2011ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು.

 

ಆದರೆ, ಇದು ಪಾಲಿಕೆ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಮನವಿ ಪತ್ರವನ್ನು ಪಾಲಿಕೆ ಆಯುಕ್ತರಿಗೆ ರವಾನಿಸಿದ್ದರು. ಆದರೆ, ಇದುವರೆಗೂ ಆಯುಕ್ತರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ” ಎಂದು ಆರೋಪಿಸಿದರು.“ಸರ್ಕಾರಿ ಆದೇಶದ ಪ್ರಕಾರ ಮಾರ್ಚ್ 2012ರೊಳಗೆ ಅರ್ಜಿದಾರರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು. ರೂ. 10 ಸಾವಿರ ಶುಲ್ಕವನ್ನು ಭರಿಸಲು ಅರ್ಜಿದಾರರೆಲ್ಲರೂ ಸಿದ್ಧರಿದ್ದಾರೆ. ಹೀಗಾಗಿ ಯಾರ ಹೆಸರಿನಲ್ಲಿ ಹಣವನ್ನು ಭರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿಯನ್ನು ನೀಡಬೇಕು.

 

ಶೀಘ್ರದಲ್ಲೇ ಆಶ್ರಯ ಮನೆಗಳನ್ನು ಮಂಜೂರು ಮಾಡಿಸಬೇಕು” ಎಂದು ಅವರು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮೋಹನ ಪವಾರ, ಜಯಶ್ರೀ ದಳವಿ, ರೇಖಾ ರಾಮಗುಂಡ, ರುಕ್ಸಾನಾ ಪಠಾಣ, ಭಾರತಿ ಪಾಲಕರ, ಸುಶಿಲಾ ಚೌಗಲೆ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.