ಆಶ್ರಯ ಮನೆ ನೀಡಲು ಆಗ್ರಹ

ಮಂಗಳವಾರ, ಜೂಲೈ 16, 2019
28 °C

ಆಶ್ರಯ ಮನೆ ನೀಡಲು ಆಗ್ರಹ

Published:
Updated:

ಬಾಗಲಕೋಟೆ: `ನವನಗರ ರಾಜೀವ್‌ಗಾಂಧಿ ಆಶ್ರಯ ಬಡಾವಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು' ಎಂದು ಆಗ್ರಹಿಸಿ ಸುಡಗಾಡು ಸಿದ್ದರ ಸಮಾಜಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.`ಸುಡಗಾಡು ಸಿದ್ದರ ಸಮಾಜಕ್ಕೆ ಸೇರಿದ 44 ಅರ್ಹ ಫಲಾನುಭವಿಗಳಿಗೆ ಈ ಹಿಂದೆ ಆಶ್ರಯ ಮನೆಗಳು ಮಂಜೂರಾಗಿತ್ತು. ಇದರಲ್ಲಿ ಇದುವರೆಗೆ ಕೇವಲ 11 ಫಲಾನುಭವಿಗಳಿಗೆ ಮಾತ್ರ ಮನೆಗಳು ದೊರೆತಿವೆ. ಉಳಿದ 33 ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ' ಎಂದು ದೂರಿದರು.`ಸುಡಗಾಡು ಸಿದ್ದರ ಸಮಾಜದ ಅರ್ಹ ಫಲಾನುಭವಿಗಳಿಗೆ ತಕ್ಷಣ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು, ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುವೆವು' ಎಂದು ಎಚ್ಚರಿಕೆ ನೀಡಿದರು.ಸುಡಗಾಡು ಸಿದ್ದರ ಸಮಾಜಸೇವಾ ಸಂಘದ ಗೌರವಾಧ್ಯಕ್ಷ ಹನಮಪ್ಪ ಗಡ್ಡಿ, ಅಧ್ಯಕ್ಷ ಯಲ್ಲಪ್ಪ ದುರುಮುರಗಿ, ಈರಪ್ಪ ಗಡ್ಡಿ, ಮರಿಯಪ್ಪ ಗಡ್ಡಿ, ಗೋವಿಂದಪ್ಪ ಗಡ್ಡಿ, ಮಾರುತಿ ದುರಮುರಗಿ, ರಾಮಣ್ಣ ದುರಮುರಗಿ, ಮುತ್ತಪ್ಪ ದುರಮುರಗಿ, ಲಕ್ಷ್ಮಣ ದುರಮುರಗಿ, ಜಂಬಣ್ಣ ದುರಮುರಗಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry