ಮಂಗಳವಾರ, ಜೂನ್ 22, 2021
28 °C

ಆಸಿಡ್ ದಾಳಿ :ಖುಲಾಸೆ ಗೊಂಡವರಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನ್ಯ ಧರ್ಮದ ಯುವತಿಯನ್ನು ಪ್ರೀತಿ ಮಾಡಿದ ತಪ್ಪಿಗೆ ಎರಡೂ ಕಣ್ಣುಗಳನ್ನು ಕಳೆದುಕೊಂಡು ದಶಕದ ಕಾಲ ಸುದೀರ್ಘ ಕಾನೂನು ಸಮರ ಸಾರಿದ್ದ ಯುವಕನೊಬ್ಬನ ನೆರವಿಗೆ ಹೈಕೋರ್ಟ್ ಧಾವಿಸಿದೆ.

ಇವರನ್ನು ಅಂಧರನ್ನಾಗಿ ಮಾಡಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಸೆಷನ್ಸ್ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.ಕೆಜಿಎಫ್ ನಿವಾಸಿ ಸುದೇಶ್ ಅವರ ಕಥೆ ಇದು. ನಹೀದಾ ಅಮೀನ್ ಎಂಬಾಕೆಯನ್ನು ಇವರು ಪ್ರೀತಿಸುತ್ತಿದ್ದರು. ಅದನ್ನು ಒಪ್ಪದ ಆಕೆಯ ಸಹೋದರಾದ ಅಮನ್ ಉಲ್ಲಾ ಹಾಗೂ ಮೊಯಿಉದ್ದೀನ್ ಆಸಿಡ್ ಹಾಕಿ ಸುದೇಶ್ ಅವರನ್ನು ಅಂಧರನ್ನಾಗಿ ಮಾಡಿದ್ದೂ ಅಲ್ಲದೇ ಹಲವು ಗಾಯಗಳನ್ನೂ ಮಾಡಿದ್ದರು.ಇದು ನಡೆದದ್ದು 2002ರಲ್ಲಿ. ಆದರೆ ಇವರೇ ಆಸಿಡ್ ದಾಳಿ ನಡೆಸಿದ್ದಾರೆ ಎಂಬ ಕುರಿತಾಗಿ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ವಿಫಲವಾಯಿತು. ಆದುದರಿಂದ 2006ರಲ್ಲಿ ಇಬ್ಬರೂ ಖುಲಾಸೆಗೊಂಡರು.ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಎಸ್. ಸಂಪಂಗಿರಾಮಯ್ಯ ಅವರು ಪ್ರಕರಣದ ಗಂಭೀರತೆ ಕುರಿತು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಅಪರಾಧಿಗಳ ವಿರುದ್ಧ ಸೂಕ್ತ ದಾಖಲೆಗಳನ್ನೂ ಅವರು ಒದಗಿಸಿದರು.ಇದನ್ನು ಪೀಠ ಮಾನ್ಯ ಮಾಡಿದೆ. ಸೆಷನ್ಸ್ ಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳು ರದ್ದು ಮಾಡಿದರು. ಇಬ್ಬರೂ ಅಪರಾಧಿಗಳು ತಲಾ ಒಂದು ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಸುದೇಶ್ ಅವರಿಗೆ ನೀಡುವಂತೆ ಪೀಠ ನಿರ್ದೇಶಿಸಿದೆ. ಇದರ ಜೊತೆಗೆ ಇಬ್ಬರಿಗೂ ತಲಾ 10ಸಾವಿರ ರೂಪಾಯಿಗಳ ದಂಡ ವಿಧಿಸಿ ಪೀಠ ಆದೇಶಿಸಿದೆ.ದರ ಹೆಚ್ಚಳ: ಖಂಡನೆಮಾಲೂರು:
ಪುರಸಭಾ ಸದಸ್ಯರು ತೆಗೆದುಕೊಂಡ ತೀರ್ಮಾನಗಳಿಗೆ ವಿರುದ್ಧವಾಗಿ ನೀರಿನ ದರ ಹೆಚ್ಚಿಸಲು ತೀರ್ಮಾನಿಸಿರುವುದನ್ನು ಮಾಜಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರಾಮಚಂದ್ರ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.