ಭಾನುವಾರ, ಮೇ 9, 2021
26 °C

ಆಸಿಡ್ ದಾಳಿ: ಮಹಿಳೆ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತನ್ನ ಪತಿಯಿಂದಲೇ ಆಸಿಡ್ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಗೌರಮ್ಮ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ.`ಆಸಿಡ್ ದಾಳಿಯಿಂದ ಗೌರಮ್ಮ ಅವರ ದೇಹದ ಸುಮಾರು 20 ರಷ್ಟು ಭಾಗ ಗಾಯಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು~ ಎಂದು ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಕುಮಾರ್ ಶನಿವಾರ ಬೆಳಿಗ್ಗೆ ಗೌರಮ್ಮ ಅವರ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ. ಘಟನೆ ನಡೆದ ಬೆನ್ನಲ್ಲೇ  ಕೆಂಗೇರಿ ಪೊಲೀಸರು ಆತನನ್ನು ಬಿಡದಿಯಲ್ಲಿ ಭಾನುವಾರ ಬಂಧಿಸಿದ್ದರು.ಆರ್ಥಿಕ ನೆರವು: ಆಸಿಡ್ ದಾಳಿಗೆ ಒಳಗಾಗಿರುವ ಗೌರಮ್ಮ ಅವರನ್ನು ಭೇಟಿ ಮಾಡಿದ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಎಸ್. ಮನೋಹರ್, ಡಿ.ಎ.ಪ್ರಮೋದ್ ಶಂಕರ್, ಇ.ಶೇಖರ್ ಮತ್ತಿತರರು ಚಿಕಿತ್ಸೆಗಾಗಿ ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿದ್ದಾರೆ.ಖಂಡನೆ: `ಗೌರಮ್ಮ ಅವರ ಮೇಲೆ ಪತಿ ಕುಮಾರ್ ನಡೆಸಿರುವ ಆಸಿಡ್ ದಾಳಿ ಒಂದು ದುಷ್ಕೃತ್ಯವಾಗಿದೆ. ಪತ್ನಿಯಿಂದ ದೂರವಾಗಿದ್ದ ಕುಮಾರ್ ಪತ್ನಿಯ ನಡತೆಶಂಕಿಸಿ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿರುವುದು ಅಕ್ಷಮ್ಯ ಅಪರಾಧ~ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷೆ ಬಿ.ಎಸ್.ಪ್ರತಿಭಾ ಕುಮಾರಿ ಅವರು ಖಂಡಿಸಿದ್ದಾರೆ.ಗೌರಮ್ಮ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಅವರು, `ಆರೋಪಿ ಪತಿಗೆ ಕಠಿಣ ಶಿಕ್ಷೆ ನೀಡಬೇಕು. ದಾಳಿಗೆ ಒಳಗಾಗಿರುವ ಗೌರಮ್ಮ ಅವರಿಗೆ ವೈದ್ಯಕೀಯ ನೆರವು ನೀಡಲು ಸರ್ಕಾರವನ್ನು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.