ಆಸಿಡ್ ಮಾರಾಟ ತಡೆ: ರಾಜ್ಯಗಳಿಗೆ ಸೂಚನೆ

7

ಆಸಿಡ್ ಮಾರಾಟ ತಡೆ: ರಾಜ್ಯಗಳಿಗೆ ಸೂಚನೆ

Published:
Updated:

ನವದೆಹಲಿ(ಪಿಟಿಐ): ಮಹಿಳೆಯರ ಮೇಲೆ ಇತ್ತೀಚೆಗೆ ಆಸಿಡ್ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಅಂಗಡಿಗಳಲ್ಲಿ ಆಸಿಡ್ ಮಾರಾಟ ಮಾಡುವುದರ ಮೇಲೆ ನಿರ್ಬಂಧ ಹೇರುವಂತೆ  ಎಲ್ಲ ರಾಜ್ಯಗಳಿಗೆ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.ಆಸಿಡ್ ಮಾರಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶದ ಅನ್ವಯ ಗೃಹ ಸಚಿವಾಲಯ ಈ ಸುತ್ತೋಲೆ ಕಳುಹಿಸಿದೆ.ಆಸಿಡ್ ಖರೀದಿಸುವವರ ವೈಯಕ್ತಿಕ ಮಾಹಿತಿ  ಇಟ್ಟುಕೊಳ್ಳದ  ಮಾರಾಟಗಾರರಿಗೆರೂ. 50,000 ದಂಡ ವಿಧಿಸುವಂತೆ ಗೃಹ ಸಚಿವಾಲಯ ತಿಳಿಸಿದೆ.ಆಸಿಡ್ ದಾಳಿಯನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲು ಸೂಕ್ತ ನಿಯಮಾವಳಿ ರೂಪಿಸುವಂತೆಯೂ ಸರ್ಕಾರಕ್ಕೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry