ಆಸೀಸ್‌ಗಿಂತ ಇಂಗ್ಲೆಂಡ್ ಚೆನ್ನಾಗಿ ಆಡುತ್ತಿದೆ: ಬೆಲ್

7

ಆಸೀಸ್‌ಗಿಂತ ಇಂಗ್ಲೆಂಡ್ ಚೆನ್ನಾಗಿ ಆಡುತ್ತಿದೆ: ಬೆಲ್

Published:
Updated:

ಮೆಲ್ಬರ್ನ್ (ಎಎಫ್‌ಪಿ): ಪರ್ತ್ ಟೆಸ್ಟ್‌ನಲ್ಲಿ ವಿಜಯ ಸಾಧಿಸಿ ಉತ್ಸಾಹದ ಅಲೆಯ ಮೇಲೆ ತೇಲುತ್ತಿರುವ ಆಸ್ಟ್ರೇಲಿಯಾ ತಂಡಕ್ಕಿಂತ ಇಂಗ್ಲೆಂಡ್‌ನವರು ಆ್ಯಷಸ್ ಸರಣಿಯಲ್ಲಿ ಈವರೆಗೆ ಉತ್ತಮ ಆಟವಾಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಬೆಲ್ ಅಭಿಪ್ರಾಯಪಟ್ಟಿದ್ದಾರೆ.‘ನಾಲ್ಕನೇ ಟೆಸ್ಟ್‌ಗೆ ಮುನ್ನ ವಿಶ್ವಾಸ ಹೆಚ್ಚಿಸಿಕೊಂಡಿರಬಹುದು. ಆದರೂ ಕಾಂಗರೂಗಳ ನಾಡಿನ ಪಡೆಗಿಂತ ಇಂಗ್ಲೆಂಡ್ ಪ್ರದರ್ಶನವು ಚೆನ್ನಾಗಿದೆ ಎಂದು ಒಪ್ಪಲೇಬೇಕು’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಪರ್ತ್‌ನಲ್ಲಿ ನಿರಾಸೆ ಹೊಂದಿದ್ದರೂ, ಆಟದ ಗುಣಮಟ್ಟದ ಬಗ್ಗೆ ಬೇಸರವಿಲ್ಲ. ಮುಂದಿನ ಪಂದ್ಯದಲ್ಲಿ ನಮ್ಮ ಪರ ಸಕಾರಾತ್ಮಕ ಫಲಿತಾಂಶ ಬರುವಂತೆ ಆಡುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry