ಆಸೀಸ್‌ಗೆ ಕಠಿಣ ಗುರಿ

7
ಕ್ರಿಕೆಟ್: ಆಮ್ಲಾ, ಡಿವಿಲಿಯರ್ಸ್‌ ಶತಕ

ಆಸೀಸ್‌ಗೆ ಕಠಿಣ ಗುರಿ

Published:
Updated:

ಪರ್ತ್ (ಎಎಫ್‌ಪಿ): ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ  ಟೆಸ್ಟ್ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಆಸ್ಟ್ರೇಲಿಯಾ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಿದೆ.ವಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರವಾಸಿ ತಂಡ ಆಸೀಸ್ ಗೆಲುವಿಗೆ 632 ರನ್‌ಗಳ ಗುರಿ ನೀಡಿದೆ. ಕಠಿಣ ಸವಾಲನ್ನು ಬೆನ್ನಟ್ಟಿರುವ ಆತಿಥೇಯ ತಂಡ ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ಎಡ್ ಕೋವನ್ (ಬ್ಯಾಟಿಂಗ್ 9) ಮತ್ತು ಡೇವಿಡ್ ವಾರ್ನರ್ (ಬ್ಯಾಟಿಂಗ್ 29) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಇನ್ನೂ ಎರಡು ದಿನಗಳ  ಆಟ ಬಾಕಿಯುಳಿದಿದ್ದು, 592 ರನ್ ಗಳಿಸುವ ಸವಾಲು ಆಸ್ಟ್ರೇಲಿಯಾದ ಮುಂದಿದೆ.ಟೆಸ್ಟ್‌ನಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ಅತಿದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ಪಡೆದ ದಾಖಲೆ ವೆಸ್ಟ್ ಇಂಡೀಸ್‌ನ ಹೆಸರಲ್ಲಿದೆ. ಈ ತಂಡ ಸೇಂಟ್ ಜಾನ್ಸ್ ನಲ್ಲಿ 2003 ರಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ 418 ರನ್‌ಗಳ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿತ್ತು.ಆಮ್ಲಾ, ಡಿವಿಲಿಯರ್ಸ್‌ ಶತಕ: ಇದಕ್ಕೂ ಮುನ್ನ ಎರಡು ವಿಕೆಟ್ ನಷ್ಟಕ್ಕೆ 230 ರನ್‌ಗಳಿಂದ ದಿನದಾಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 569 ರನ್ ಗಳಿಸಿತ್ತು. ದ್ವಿಶತಕ ಗಳಿಸುವ ಅವಕಾಶವನ್ನು ಕೇವಲ ನಾಲ್ಕು ರನ್‌ಗಳಿಂದ ಕಳೆದುಕೊಂಡು ಹಾಶಿಮ್ ಆಮ್ಲಾ (196, 221 ಎಸೆತ, 21 ಬೌಂ) ಹಾಗೂ ಎಬಿ ಡಿವಿಲಿಯರ್ಸ್ (169, 184 ಎಸೆತ, 21 ಬೌಂ, 3 ಸಿಕ್ಸರ್) ಅವರ ಭರ್ಜರಿ ಆಟ ಪ್ರವಾಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣ.99 ರನ್‌ಗಳಿಂದ ಆಟ ಮುಂದುವರಿಸಿದ್ದ ಆಮ್ಲಾಗೆ 108 ರನ್ ಗಳಿಸಿದ್ದ ಸಂದರ್ಭ ಜೀವದಾನ ಲಭಿಸಿತ್ತು. ಅದನ್ನು ಹೊರತುಪಡಿಸಿದರೆ ಅವರು ಆಸೀಸ್ ಬೌಲರ್‌ಗಳ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿದರು. ಆದರೆ 196 ರನ್ ಗಳಿಸಿದ್ದ ಸಂದರ್ಭ ಮಿಷೆಲ್ ಜಾನ್ಸನ್ ಅವರ ಅತ್ಯುತ್ತಮ ರಿಟರ್ನ್ ಕ್ಯಾಚ್‌ಗೆ ಔಟಾದರು. ಸಂಕ್ಷಿಪ್ತ ಸ್ಕೋರ್: ದ. ಆಫ್ರಿಕಾ: ಮೊದಲ ಇನಿಂಗ್ಸ್ 225 ಮತ್ತು ಎರಡನೇ ಇನಿಂಗ್ಸ್ 111.5 ಓವರ್‌ಗಳಲ್ಲಿ 569 (ಹಾಶಿಮ್ ಆಮ್ಲಾ 196, ಜಾಕ್ ಕಾಲಿಸ್ 37, ಎಬಿ ಡಿವಿಲಿಯರ್ಸ್ 169, ಫಾಫ್ ಡು ಪ್ಲೆಸಿಸ್ 27, ಮಿಷೆಲ್ ಸ್ಟಾರ್ಕ್ 154ಕ್ಕೆ 6, ಮಿಷೆಲ್ ಜಾನ್ಸನ್ 110ಕ್ಕೆ 4). ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 163 ಮತ್ತು ಎರಡನೇ ಇನಿಂಗ್ಸ್ 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 40 (ಎಡ್ ಕೋವನ್ ಬ್ಯಾಟಿಂಗ್ 9, ಡೇವಿಡ್ ವಾರ್ನರ್ ಬ್ಯಾಟಿಂಗ್ 29)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry