ಆಸೀಸ್‌ಗೆ ಸವಾಲಿನ ಹಾದಿ ...

7

ಆಸೀಸ್‌ಗೆ ಸವಾಲಿನ ಹಾದಿ ...

Published:
Updated:
ಆಸೀಸ್‌ಗೆ ಸವಾಲಿನ ಹಾದಿ ...

2007ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆದಾಗ ಕ್ರಿಕೆಟ್ ಪ್ರೇಮಿಗಳು ಬೆರಗಾಗಲಿಲ್ಲ. ಅದೊಂದು ನಿರೀಕ್ಷಿತ ಘಟನೆ ಎಂದು ಎಲ್ಲರೂ ಸುಮ್ಮನಾಗಿದ್ದರು. ಏಕೆಂದರೆ ಆ ಟೂರ್ನಿಯ ಸಂದರ್ಭ ಆಸೀಸ್ ತಂಡ ಅಷ್ಟೊಂದು ಬಲಿಷ್ಠವಾಗಿತ್ತು. ರಿಕಿ ಪಾಂಟಿಂಗ್ ನೇತೃತ್ವದ ಬಳಗ ಕಪ್ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿ ಹೊಂದಿತ್ತು. ಮಾತ್ರವಲ್ಲ ಟೂರ್ನಿಯುದ್ದಕ್ಕೂ ಆ ನಿರೀಕ್ಷೆಯನ್ನು ಉಳಿಸಿಕೊಂಡಿತ್ತಲ್ಲದೆ, ಚಾಂಪಿಯನ್ ಪಟ್ಟ ಧರಿಸಿತ್ತು.

 

ಆಸ್ಟ್ರೇಲಿಯಾ ತಂಡ ಸ್ಟೀವ್ ವಾ ನೇತೃತ್ವದಲ್ಲಿ 1999 ರಲ್ಲಿ ಕಪ್ ಎತ್ತಿಹಿಡಿದಾಗ ಅಲ್ಪ ಅಚ್ಚರಿ ಉಂಟಾಗಿತ್ತು. 2003 ಮತ್ತು 2007 ರಲ್ಲಿ ಕಾಂಗರೂ ನಾಡಿನವರು ಫೇವರಿಟ್ ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆಸೀಸ್ ಈಗಾಗಲೇ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್’ ಸಾಧಿಸಿದೆ. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್ ಸಂಭ್ರಮ ಎದುರಾಗಿದೆ. ಆಸ್ಟ್ರೇಲಿಯಾ ಸತತ ನಾಲ್ಕನೇ ಬಾರಿ ಕಪ್ ಗೆಲ್ಲುವುದೇ? ಪಾಂಟಿಂಗ್ ಅವರು ವಿಶ್ವಕಪ್ ಎತ್ತಿಹಿಡಿಯುವುದರಲ್ಲಿ ‘ಹ್ಯಾಟ್ರಿಕ್’ ಸಾಧನೆ ಮಾಡುವರೇ? ಮುಂತಾದ ಪ್ರಶ್ನೆಗಳು ಕ್ರಿಕೆಟ್ ಪ್ರಿಯರನ್ನು ಕಾಡುತ್ತಿದೆ.ಆದರೆ ಆಸೀಸ್ ತಂಡದ ಪ್ರಸಕ್ತ ಫಾರ್ಮ್‌ನ್ನು ಗಮನಿಸಿದರೆ, ವಿಶ್ವಕಪ್ ಮತ್ತೆ ಕಾಂಗರೂ ನಾಡಿನವರ ತೆಕ್ಕೆಗೆ ಸೇರುವುದು ಅನುಮಾನ. ಏಕೆಂದರೆ 2007ರ ಬಳಿಕದ ಅವಧಿಯಲ್ಲಿ ಕ್ರಿಕೆಟ್ ವಿಶ್ವದಲ್ಲಿ ನಡೆದಿರುವ ಏರಿಳಿತಗಳು ಹಲವು. ಅದರಲ್ಲಿ ಪ್ರಮುಖವಾದದ್ದು ಆಸೀಸ್ ತಂಡದ ಕಳಪೆ ಪ್ರದರ್ಶನ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಈ ತಂಡ ಸಾಕಷ್ಟು ಸೋಲುಗಳನ್ನು ಎದುರಿಸಿದೆ.ಕಳೆದ ವಿಶ್ವಕಪ್ ಟೂರ್ನಿಯ ಕೊನೆಯ ಎಸೆತಎಸೆದಿದ್ದುಆಸ್ಟ್ರೇಲಿಯಾದಆ್ಯಂಡ್ರ್ಯೂಸೈಮಂಡ್ಸ್.ಅದನ್ನುಎದುರಿಸಿದ್ದುಶ್ರೀಲಂಕಾದಚಮಿಂದವಾಸ್. ಆ ಚೆಂಡು ವಾಸ್ ಅವರನ್ನು ತಪ್ಪಿಸಿ ವಿಕೆಟ್ ಕೀಪರ್ ಆ್ಯಡಮ್ ಗಿಲ್‌ಕ್ರಿಸ್ಟ್ ಕೈ ಸೇರಿತ್ತು. ‘ಗಿಲಿ’ ಆ ಚೆಂಡನ್ನು ಹಿಡಿದ ಬಳಿಕ ಗೆಲುವಿನ ಕೇಕೆ ಹಾಕಿದ್ದರು. ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 53 ರನ್‌ಗಳ ಜಯ ಸಾಧಿಸಿತ್ತು. ಮಾತ್ರವಲ್ಲ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್’ ಸಾಧನೆ ಮಾಡಿತ್ತು.ಉಪಭೂಖಂಡದಲ್ಲಿ ಈ ಬಾರಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಸೀಸ್‌ಗೆ ಫೇವರಿಟ್ ಪಟ್ಟ ಲಭಿಸಿಲ್ಲ. ಹಲವು ಫೇವರಿಟ್‌ಗಳು ಇರುವುದು 10ನೇ ವಿಶ್ವಕಪ್ ಟೂರ್ನಿಯ ವಿಶೇಷಗಳಲ್ಲೊಂದು. ಈ ಬಾರಿ ನಡೆಯಲಿರುವುದು ಒಂದು ರೀತಿಯಲ್ಲಿ ‘ಓಪನ್’ ವಿಶ್ವಕಪ್. ನಾಲ್ಕೈದು ತಂಡಗಳಿಗೆ ಕಪ್ ಗೆಲ್ಲುವ ಸಾಧ್ಯತೆಯನ್ನು ಕಲ್ಪಿಸಲಾಗಿದೆ. ಈ ರೇಸ್‌ನಲ್ಲಿ ಎಲ್ಲಕ್ಕಿಂತ ಮುಂದಿರುವುದು ಭಾರತ. ಅದಕ್ಕೆ ಕಾರಣ ಹಲವು ಇರಬಹುದು. ಮಹೇಂದ್ರ ಸಿಂಗ್ ದೋನಿ ಬಳಗ ತವರು ನೆಲದಲ್ಲಿ ಆಡುತ್ತಿದೆ ಎಂಬುದು ಮುಖ್ಯ ಕಾರಣ. ಜೊತೆಗೆ ಕಳೆದ ಎರಡು ಮೂರು ವರ್ಷಗಳಿಂದ ಭಾರತ ತಂಡ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದೆ.ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚೊಚ್ಚಲ ವಿಶ್ವಕಪ್ ಗೆಲ್ಲುವ ಪ್ರಯತ್ನದಲ್ಲಿವೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಈ ಕಾರಣ ಆಸ್ಟ್ರೇಲಿಯಾಕ್ಕೆ ಟ್ರೋಫಿಯೆಡೆಗಿನ ಹಾದಿ ಹಿಂದೆಂದಿಗಿಂತಲೂ ಕಠಿಣವಾಗಿದೆ. ಏಕಾಂಗಿ ಹೋರಾಟದ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಆಟಗಾರ ಪ್ರಸಕ್ತ ಆಸ್ಟ್ರೇಲಿಯಾ ತಂಡದಲ್ಲಿ ಕಾಣುತ್ತಿಲ್ಲ. 2007 ರಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಹ ಆಟಗಾರರ ಕೊರತೆ ಇದೆ.ಇತ್ತೀಚಿನ ದಿನಗಳಲ್ಲಿ ಆಸೀಸ್ ಸಾಕಷ್ಟು ಹಿನ್ನಡೆ ಅನುಭವಿಸಿರುವುದು ಸತ್ಯ. ಆದರೆ ಪಾಂಟಿಂಗ್ ಬಳಗದಲ್ಲಿ ಹೋರಾಟದ ಮನೋಭಾವ ಕಾಣಬಹುದು. ಸುಲಭದಲ್ಲಿ ಬಿಟ್ಟುಕೊಡಲು ಆಸ್ಟ್ರೇಲಿಯನ್ನರು ಸಿದ್ಧವಿಲ್ಲ. ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಅದಕ್ಕೆ ಹಲವು ಉದಾಹರಣೆಗಳು ನಮಗೆ ಕಾಣಿಸುತ್ತದೆ.ಶೇನ್ ವ್ಯಾಟ್ಸನ್, ಕ್ಯಾಮರೂನ್ ವೈಟ್ ಮುಂತಾದ ಆಲ್‌ರೌಂಡರ್‌ಗಳ ಬಲದೊಂದಿಗೆ ಭಾರತಕ್ಕೆ ಆಗಮಿಸಿರುವ ಆಸೀಸ್ ತಂಡ ಈ ಬಾರಿ ಕಪ್‌ನೊಂದಿಗೆ ಮರಳಿದರೆ ಕ್ರಿಕೆಟ್ ಪ್ರೇಮಿಗಳು ಅಚ್ಚರಿ ಪಡುವುದು ನಿಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry