ಶನಿವಾರ, ಮೇ 8, 2021
27 °C

ಆಸ್ಟಿನ್‌ಟೌನ್‌ಹೆರಿಗೆ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ಟಿನ್‌ಟೌನ್‌ನ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗಿದೆ.`ಹೊರಗಿನಿಂದ ನೋಡಿದರೆ ಆಸ್ಪತ್ರೆಯು ಕಸದ ತೊಟ್ಟಿಯಂತೆ ಕಾಣುತ್ತದೆ. ಸಾರ್ವಜನಿಕರು ಇಲ್ಲಿ ಬಂದು ಕಸವನ್ನು ಸುರಿದು ಹೋಗುತ್ತಾರೆ. ಆಸ್ಪತ್ರೆ ಎಂದು ತಿಳಿದಿದ್ದರೂ ಆಸ್ಪತ್ರೆಯ ಆವರಣದಲ್ಲಿಯೇ ತ್ಯಾಜ್ಯವನ್ನು ಸುರಿಯುವುದು ಹೆಚ್ಚಾಗಿದೆ' ಎಂದು ಆಸ್ಪತ್ರೆಯ ನರ್ಸ್ ನಿರ್ಮಲಾ ಹೇಳಿದರು.`ಆಸ್ಪತ್ರೆಯ ಸುತ್ತಲೂ ಕೊಳಚೆ ನೀರು ನಿಂತಿದೆ. ಇದರಿಂದ ಡೆಂಗೆ ಬರುವ ಭೀತಿ ಕಾಡುತ್ತಿದೆ. ನನ್ನ ಎರಡು ತಿಂಗಳ ಹಿಂದೆ ಮಗುವಿಗೆ ಸೋಂಕು ತಗುಲಿ ಈಗ ಚೇತರಿಸಿಕೊಳ್ಳುತ್ತಿದೆ' ಎಂದು ಸ್ಥಳೀಯ ನಿವಾಸಿ ಲಕ್ಷ್ಮಮ್ಮ ದೂರಿದರು.ಆಸ್ಪತ್ರೆಯ ಸುತ್ತಲೂ ಇರುವ ಕಸ , ನಿಂತಿರುವ ಕೊಳಚೆ ನೀರು ಸುತ್ತಮುತ್ತಲಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಅನಾರೋಗ್ಯದ ಭೀತಿ ತಂದಿದೆ.`ಕಸವನ್ನು ನಿಯಮಿತವಾಗಿ ತೆಗೆಸಲಾಗುತ್ತಿದೆ. ಆದರೆ, ಸಾರ್ವಜನಿಕರೇ ಕಸ ಹಾಕುವುದು ಹೆಚ್ಚಾಗಿದೆ. ಹೀಗಾಗಿ ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಇಲ್ಲಿನ ತ್ಯಾಜ್ಯದ ಸಮಸ್ಯೆಗೆ ಪರಿಹಾರ ನೀಡಲಾಗುವುದು' ಎಂದು ಬಿಬಿಎಂಪಿ ಸದಸ್ಯೆ ಸರಳಾ ಮೋಹನ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.