ಆಸ್ಟ್ರೇಲಿಯಕ್ಕೆ ಸರಣಿ ಜಯ

7

ಆಸ್ಟ್ರೇಲಿಯಕ್ಕೆ ಸರಣಿ ಜಯ

Published:
Updated:
ಆಸ್ಟ್ರೇಲಿಯಕ್ಕೆ ಸರಣಿ ಜಯ

ಕೊಲಂಬೊ(ಎಎಫ್‌ಪಿ):  ಕ್ಸೇವಿಯರ್ ಡೊಹರ್ಟಿ ಹಾಗೂ ಬ್ರೆಟ್ ಲೀ (ತಲಾ ನಾಲ್ಕು     ವಿಕೆಟ್) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯ ತಂಡದವರು ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್ ಜಯ ಪಡೆದು 3-1ರಲ್ಲಿ ಮುನ್ನಡೆ ಸಾಧಿಸಿ ಸರಣಿ ತಮ್ಮದಾಗಿಸಿಕೊಂಡರು.ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸೀಸ್ ತಂಡದ ಮಾರಕ ದಾಳಿಗೆ ಕುಸಿದ ಆತಿಥೇಯ ತಂಡದವರು 38.4 ಓವರ್‌ಗಳಲ್ಲಿ 132 ರನ್ ಮಾತ್ರ ಗಳಿಸಿದರು. ಮಾಹೇಲ ಜಯವರ್ಧನೆ (50) ತಂಡಕ್ಕೆ ಕೊಂಚ ಆಸರೆಯಾದರು.  ಈ ಮೊತ್ತಕ್ಕೆ ಉತ್ತರವಾಗಿ ಆಸೀಸ್ 28 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಶಾನ್ ಮಾರ್ಷ್ (70) ಗಳಿಸಿ ತಂಡದ ಗೆಲುವನ್ನು ಸುಲಭವಾಗಿಸಿದರು. ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 38.4 ಓವರ್‌ಗಳಲ್ಲಿ 132 (ತಿಲಕರತ್ನೆ ದಿಲ್ಯಾನ್ 12, ಕುಮಾರ ಸಂಗಕ್ಕಾರ 31, ಮಾಹೇಲ ಜಯವರ್ಧನೆ 53; ಬ್ರೆಟ್ ಲೀ 15ಕ್ಕೆ4, ಡಗ್ ಬೌಲಿಂಜರ್ 28ಕ್ಕೆ1, ಶೇನ್ ವಾಟ್ಸನ್ 20ಕ್ಕೆ 1, ಕ್ಸೇವಿಯರ್ ಡೊಹರ್ಟಿ 28ಕ್ಕೆ4); ಆಸ್ಟ್ರೇಲಿಯ: 28 ಓವರ್‌ಗಳಲ್ಲಿ 5 ವಿಕೆಟ್‌ಗೆ 133 ( ಶಾನ್ ಮಾರ್ಷ್ 70, ಮೈಕಲ್ ಕ್ಲಾರ್ಕ್ ಔಟಾಗದೇ 38; ಸೀ ಕುಗೆ ಪ್ರಸನ್ನ 32ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry