ಆಸ್ಟ್ರೇಲಿಯನ್ನರ `ಜೀನ್'ಗಳು ಭಾರತೀಯ ಮೂಲದ್ದು

7

ಆಸ್ಟ್ರೇಲಿಯನ್ನರ `ಜೀನ್'ಗಳು ಭಾರತೀಯ ಮೂಲದ್ದು

Published:
Updated:
ಆಸ್ಟ್ರೇಲಿಯನ್ನರ `ಜೀನ್'ಗಳು ಭಾರತೀಯ ಮೂಲದ್ದು

ಬರ್ಲಿನ್ (ಪಿಟಿಐ):  ಆಸ್ಟ್ರೇಲಿಯ ಮೂಲ ನಿವಾಸಿಗಳ ವಂಶವಾಹಿಯಲ್ಲಿ ಭಾರತೀಯರ `ಜೀನ್' ಗಳಿರುವುದು ಪತ್ತೆಯಾಗಿದೆ ಎಂದು ಬರ್ಲಿನ್ ಸಂಶೋಧಕರು ತಿಳಿಸಿದ್ದಾರೆ.

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮೂಲನಿವಾಸಿಗಳು ಮತ್ತು ಭಾರತೀಯರ ನಡುವೆ ಸಂಪರ್ಕ ಇತ್ತು. ಆಗಿನ್ನೂ ಆಸ್ಟ್ರೇಲಿಯನ್ನರು ಯೂರೋಪ್ ಸಂಪರ್ಕ ಹೊಂದಿರಲಿಲ್ಲ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಮತ್ತು ಆಸ್ಟ್ರೇಲಿಯನ್ ಪ್ರಜೆಗಳ ವಂಶವಾಹಿಯನ್ನು ಈ ಸಂಶೋಧನೆಗೆ ಬಳಸಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ನ್ಯೂಗಿನಿ ಸೇರಿದಂತೆ ದಕ್ಷಿಣ ಆಸ್ಟ್ರೇಲಿಯನ್ನರ ವಂಶವಾಹಿ ಮತ್ತು ದಕ್ಷಿಣ ಏಷ್ಯಾ ಹಾಗೂ ಭಾರತೀಯರ ವಂಶವಾಹಿ ನಡುವೆ  ಸಾಮ್ಯತೆಗಳಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.ಆದರೆ ಆಸ್ಟ್ರೇಲಿಯಾದ ಜೀವವಿಜ್ಞಾನಿಗಳು ಇದೊಂದು ಭಾವನಾತ್ಮಕ ಸಂಶೋಧನೆ ಎಂದು ಅಲ್ಲಗಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry