ಆಸ್ಟ್ರೇಲಿಯಾದ ಅಗ್ಲಿ ಸಂಸ್ಥೆಯಿಂದ ಸಂಪರ್ಕ ಸೇತು ವೆಬ್‌ಸೈಟ್

7

ಆಸ್ಟ್ರೇಲಿಯಾದ ಅಗ್ಲಿ ಸಂಸ್ಥೆಯಿಂದ ಸಂಪರ್ಕ ಸೇತು ವೆಬ್‌ಸೈಟ್

Published:
Updated:

 ಬೆಂಗಳೂರು: ಕೈಗಾರಿಕೆ ಹಾಗೂ ಸಾರ್ವಜನಿಕ ಕಂಪೆನಿಗಳೂ ಸೇರಿದಂತೆ ಎಲ್ಲ ಸಂಸ್ಥೆಗಳ ವ್ಯವಹಾರಕ್ಕೂ ಉಪಯೋಗವಾಗುವ ನಿಟ್ಟಿನಲ್ಲಿ ನೂತನ ಅಂತರ್ಜಾಲ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಲು ಆಸ್ಟ್ರೇಲಿಯಾ ಮೂಲದ `ಅಗ್ಲಿ~ ಸಂಸ್ಥೆ ಮುಂದಾಗಿದೆ.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಜಾನ್ ಕನಾರ್, `ಎಲ್ಲ ರೀತಿಯ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಈ ಜಾಲ ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ ಭಾರತದಲ್ಲಿ ಕಾರ್ಯಾರಂಭ ಮಾಡುವ ಉದ್ದೇಶ ಸಂಸ್ಥೆಯದ್ದಾಗಿದೆ.

 

ಈ ಅಂತರ್ಜಾಲ ವ್ಯವಸ್ಥೆಯಲ್ಲಿ ನೋಂದಣಿಗೊಂಡ ಸಂಸ್ಥೆಗಳು ಯಾವುದೇ ಮಧ್ಯವರ್ತಿಗಳ ಸಂಪರ್ಕವಿಲ್ಲದೇ ಕೊಳ್ಳುವ ಹಾಗೂ ಮಾರುವ ಸಂಬಂಧ ತಮ್ಮಲ್ಲಿಯೇ ಆಂತರಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ~ ಎಂದರು.ಸಂಸ್ಥೆಯ ಸ್ಥಳೀಯ ಸಲಹೆಗಾರ ನರಸಿಂಹನ್, `ಯಾವುದೇ ಮಾಹಿತಿಯನ್ನು ಪಡೆಯಲು ಅಥವಾ ತಮಗೆ ಬೇಕಾದ ಉತ್ಪನ್ನಗಳ ಬಗ್ಗೆ ತಿಳಿಯಲು ಈ ವ್ಯವಸ್ಥೆಯ ಮೂಲಕ ಅನುಕೂಲವಾಗಲಿದೆ. ಈ ಅಂತರ್ಜಾಲ ನಿರ್ವಹಣೆಯ ವೆಚ್ಚವೂ ಇತರೆ ಸಂಕರ್ಪಜಾಲಗಳಿಗೆ ಹೋಲಿಸಿದರೆ ಕಡಿಮೆ ಇದೆ.

 

ಜಗತ್ತಿನ 13 ಭಾಷೆಗಳಲ್ಲಿ ಲಭ್ಯವಿರುವ ಜಾಲದ ಮಾಹಿತಿ ವ್ಯವಸ್ಥೆ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ಜಾಲವನ್ನು ಆರಂಭಿಸಲು ಸಂಸ್ಥೆ ಪ್ರಯತ್ನ ನಡೆಸಿದೆ. www.uglii.com  ವೆಬ್ ಸೈಟ್ ನಲ್ಲಿ ಸಂಸ್ಥೆಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು~ ಎಂದು ತಿಳಿಸಿದರು.ಅಗ್ಲಿ ಸಂಸ್ಥೆಯ ತಂತ್ರಜ್ಞಾನ ನಿರ್ದೇಶಕ ರಾಬರ್ಟ್ ಮೇ, ಸಂಯೋಜಕ ಸ್ಟೀವ್ ತಾಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry