ಗುರುವಾರ , ಮೇ 13, 2021
39 °C
ಹಾಕಿ: ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುವ ಕನಸು ಭಗ್ನ

ಆಸ್ಟ್ರೇಲಿಯಾ ಎದುರು ಸೋತ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಟರ್‌ಡಮ್ (ಪಿಟಿಐ): ಭಾರತ ತಂಡ ಎಫ್‌ಐಎಚ್ ಹಾಕಿ ಲೀಗ್ ರೌಂಡ್-3 ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಕೈಯಲ್ಲಿ 1-5 ಗೋಲುಗಳ ಸೋಲು ಅನುಭವಿಸಿತು.ಇದರೊಂದಿಗೆ 2014ರಲ್ಲಿ ಹೇಗ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯುವ ತಂಡದ ಕನಸು ಭಗ್ನಗೊಂಡಿತು. ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.ಎಂಟರಘಟ್ಟದಲ್ಲಿ ಸೋಲು ಅನುಭವಿಸಿರುವ ಕಾರಣ ಅಗ್ರ ಮೂರರಲ್ಲಿ ಕಾಣಿಸಿಕೊಳ್ಳುವ ಭಾರತದ ಸಾಧ್ಯತೆ ಅಸ್ತಮಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 100ನೇ ಅಂತರರಾಷ್ಟ್ರೀಯ ಪಂದ್ಯ ಇದಾಗಿತ್ತು.ಸರ್ದಾರ್ ಸಿಂಗ್ ಬಳಗ ಪಂದ್ಯದ ಯಾವುದೇ ಹಂತದಲ್ಲೂ ಎದುರಾಳಿಗೆ ತಕ್ಕ ಪೈಪೋಟಿ ನೀಡಲಿಲ್ಲ. ಗ್ಲೆನ್ ಸಿಂಪ್ಸನ್ (2ನೇ ನಿಮಿಷ), ಮ್ಯಾಟ್ ಗಾಡೆಸ್ (20), ರಸೆಲ್ ಫೋರ್ಡ್ (22) ಮತ್ತು ಮ್ಯಾಥ್ಯೂ ಸ್ವಾನ್ (39) ಆಸೀಸ್ ಪರ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಗೋಲು ಉಡುಗೊರೆ ರೂಪದಲ್ಲಿ ಲಭಿಸಿತು.ಭಾರತ ತಂಡದ ಏಕೈಕ ಗೋಲನ್ನು ಚಿಂಗ್ಲೇಸನ ಸಿಂಗ್ 21ನೇ ನಿಮಿಷದಲ್ಲಿ ತಂದಿತ್ತರು. ಭಾರತ ಇನ್ನು 5 ರಿಂದ 8ರ ವರೆಗಿನ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ಆಡಲಿದೆ.ಭಾರತಕ್ಕೆ ಹೀನಾಯ ಸೋಲು

ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲೆಂಡ್ ಎದುರಿನ ಪಂದ್ಯದಲ್ಲಿ ಸೋಲು ಕಂಡ ಭಾರತ ಮಹಿಳಾ ತಂಡದವರು ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3 (ಸೆಮಿಫೈನಲ್) ಟೂರ್ನಿಯಿಂದ ಹೊರಬಿದ್ದರು.ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಲೆಂಡ್ 8-1ಗೋಲುಗಳಿಂದ ಭಾರತವನ್ನು ಮಣಿಸಿತು. ಪಂದ್ಯದ ಆರಂಭದಿಂದಲೇ ಚುರುಕಿನ ಪ್ರದರ್ಶನ ತೋರಿದ ಹಾಲೆಂಡ್ ತಂಡದ ಕಿಮ್ ಲಾಮರ್ಸ್‌ 21ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ಗೋಲು ಬಂದು ಎರಡು ನಿಮಿಷದ ನಂತರ ನಾಯಕಿ ಮಾರ್ತೆಜಿ ಗೋಲು ತಂದಿತ್ತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.