ಆಸ್ಟ್ರೇಲಿಯಾ: ಏಷ್ಯನ್ನರ ಸಂಖ್ಯೆ ಹೆಚ್ಚಳ

ಬುಧವಾರ, ಜೂಲೈ 17, 2019
25 °C

ಆಸ್ಟ್ರೇಲಿಯಾ: ಏಷ್ಯನ್ನರ ಸಂಖ್ಯೆ ಹೆಚ್ಚಳ

Published:
Updated:

ಮೆಲ್ಬರ್ನ್, (ಪಿಟಿಐ): ನೌಕರಿಗಾಗಿ, ಉನ್ನತ ವ್ಯಾಸಂಗಕ್ಕಾಗಿ ಏಷ್ಯಾದಿಂದ ಅದರಲ್ಲೂ ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಇದೀಗ ಏಷ್ಯಾ ಮೂಲದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಎಂದು  ಹೊಸ ಅಂಕಿ ಅಂಶಗಳು ತಿಳಿಸಿವೆ.ಯೂರೋಪ್ ಮೂಲದವರಿಗಿಂತಲೂ ಏಷ್ಯಾದವರ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಟ್ರೇಲಿಯಾದ ಇತಿಹಾಸದಲ್ಲೇ ಇದು ಮೊದಲ ಬಾರಿ ಎಂದು ಹೇಳಲಾಗಿದೆ. 2000 ಮಧ್ಯದಲ್ಲಿ 10.3 ಲಕ್ಷದಷ್ಟಿದ್ದ ಏಷ್ಯಾ ಮೂಲದವರ ಸಂಖ್ಯೆ 2010ರ ವೇಳೆಗೆ ದ್ವಿಗುಣಗೊಂಡು 20.1 ಲಕ್ಷದಷ್ಟಾಗಿದೆ ಎಂದು ಜನಸಂಖ್ಯೆ ಲೆಕ್ಕಾಚಾರ ಇಲಾಖೆಯ ಹೊಸ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.ಇದೇ ವೇಳೆ ಈ ಅವಧಿಯಲ್ಲಿ ಭಾರತೀಯರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದೂ ತಿಳಿಸಲಾಗಿದೆ.

ಆಸ್ಟ್ರೇಲಿಯಾದ ಜನಸಂಖ್ಯೆಯಲ್ಲಿ ಏಷ್ಯಾ ಮೂಲದವರು ಮೂರನೇ ಸ್ಥಾನದಲ್ದ್ದ್‌ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry