ಆಸ್ಟ್ರೇಲಿಯಾ ಓಪನ್: ಸೆಮಿಫೈನಲ್‌ಗೆ ರೋಜರ್

7

ಆಸ್ಟ್ರೇಲಿಯಾ ಓಪನ್: ಸೆಮಿಫೈನಲ್‌ಗೆ ರೋಜರ್

Published:
Updated:

ಮೆಲ್ಬನ್ (ಎಎಫ್‌ಪಿ): ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಸ್ವಿಟ್ಜರ್‌ಲೆಂಡ್‌ನ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ವರ್ಷದ ಮೊದಲ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆಡರರ್ 6-1, 6-3, 6-3ರಲ್ಲಿ ತಮ್ಮ ದೇಶದವರೇ ಆದ ಸ್ಟ್ಯಾನಿಸ್ಲಿಸ್ ವಾವ್ರಿಂಕಾ ಅವರನ್ನು ಮಣಿಸಿದರು. ಫೆಡರರ್ ಈ ಗೆಲುವಿನ ಮೂಲಕ ಪ್ರಶಸ್ತಿ ಗೆಲ್ಲುವತ್ತ ಒಂದು ಹಜ್ಜೆ ಮುಂದೆ ಹಾಕಿದ್ದಾರೆ.ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಮೂರನೇ ಶ್ರೇಯಾಂಕದ ಆಟಗಾರ ನೊವಾಕ್ ಜೊಕೋವಿಕ್ 6-1, 7-6, 1-6ರಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಅವರನ್ನು ಮಣಿಸಿ ಅಘಾತ ನೀಡಿದರು.ಸೆಮಿಫೈನಲ್‌ಗೆ ಅಗ್ರ ಶ್ರೇಯಾಂಕದ ಜೋಡಿ:
ಅಗ್ರ ಶ್ರೇಯಾಂಕದ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯನ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಬಾಬ್-ಮೈಕ್ ಅವರು 6-3, 7-6ರಲ್ಲಿ ಆತಿಥೇಯ ಆಸ್ಟ್ರೇಲಿಯಾದ ಜರ್ಗಿನ್ ಮೆಲ್ಜರ್ ಹಾಗೂ ಜರ್ಮನಿಯ ಪಿಲಿಪ್ ಪೆಜಶ್ನಾರ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. ನಾಲ್ಕನೇ ಶ್ರೇಯಾಂಕಿತ ಪೋಲ್ಯಾಂಡ್‌ನ ಲುಕಜಾ ಕುಬೋಟ್ ಹಾಗೂ ಆಸ್ಟ್ರೇಲಿಯಾದ ಓಲಿವೆರ್ ಮಾರಚ್ 3-6, 4-6ರಲ್ಲಿ ಅಮೆರಿಕದ ಇರಿಕ್ ಬುಟರೋಕ್ ಹಾಗೂ ಹಾಲೆಂಡ್‌ನ ಜೇನ್ ಜುಲೈಲ್ ರೋಜೆರ್ ಜೋಡಿಯನ್ನು ಪರಾಭವಗೊಳಿಸಿದರು.ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ ಅವರು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 3-6, 6-3, 6-3ರಲ್ಲಿ ಇಟಲಿಯ ಫ್ರಾನ್ಸಿಸ್ಕಾ ಶಿಯವೋನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಇನ್ನೊಂದು ಪಂದ್ಯದಲ್ಲಿ ಚೀನಾದ ನಾ ಲೀ 6-2, 6-4ರಲ್ಲಿ ಜರ್ಮನಿಯ ಆ್ಯಂಡ್ರೋ ಪೆಟ್ಕೋವಿಕ್ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.ಅಗ್ರ ಶ್ರೇಯಾಂಕದ ಆಟಗಾರರಾದ ಅರ್ಜೆಂಟೀನಾದ ಗಿಸೆಲೋ ಡೊಲ್ಕೊ ಹಾಗೂ ಇಟಲಿಯ ಫ್ಲೆವಿಯಾ ಪೆನ್ನಟ್ಟಾ ಮಹಿಳೆಯರ ಡಬಲ್ಸ್‌ನ ಎಂಟರ ಘಟ್ಟದ ಪಂದ್ಯದಲ್ಲಿ 6-0, 6-3ರಲ್ಲಿ ರಷ್ಯಾದ ನಥಾಲಿಯೆ ಗ್ರಾಂಡೈನ್ ಹಾಗೂ ಜೆಕ್ ಗಣರಾಜ್ಯದ ವದಿಮಿರ್ ಯುಲಿರೋವಾ ಮೇಲೆ ಗೆಲುವು ಪಡೆದರು.ಬಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾ ಹಾಗೂ ರಷ್ಯಾದ ಮರಿಯಾ ಕಿರಿಲೆಂಕೊ 5-7, 6-3, 6-2ರಲ್ಲಿ ಚೈನೀಸ್ ತೈಪಿಯಾದ ಚಾಯ್-ಜುಂಗ್-ಚುಯಾಂಗ್ ಮತ್ತು ಸು-ವೈ-ಹೈಯಿಯಾ ಜೋಡಿಯನ್ನು ಮಣಿಸಿ ನಾಲ್ಕರ ಘಟಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry