ಶುಕ್ರವಾರ, ಡಿಸೆಂಬರ್ 6, 2019
19 °C

ಆಸ್ಟ್ರೇಲಿಯಾ ತಂಡಕ್ಕೆ ಮಹಿ ಎಚ್ಚರಿಕೆ

Published:
Updated:
ಆಸ್ಟ್ರೇಲಿಯಾ ತಂಡಕ್ಕೆ ಮಹಿ ಎಚ್ಚರಿಕೆ

ಸಿಡ್ನಿ (ರಾಯಿಟರ್ಸ್/ಪಿಟಿಐ): `ಮೆಲ್ಬರ್ನ್ ಟೆಸ್ಟ್ ಪಂದ್ಯದ ಗೆಲುವಿನಿಂದ ತೀರ ಉಬ್ಬಬೇಡಿ. ತಿರುಗೇಟು ನೀಡುವ ಸಾಮರ್ಥ್ಯ ನಮಗಿದೆ~ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.`ಭಾರತ ತಂಡದ ಪ್ರಮುಖ ಗುಣವೆಂದರೆ ಪುಟಿದೇಳುವುದು. ಇದಕ್ಕೆ ಹಿಂದಿನ ಉದಾಹರಣೆಗಳೇ ಸಾಕ್ಷಿ. ಹಾಗಾಗಿ ಸರಣಿಯ ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ನಾವೇನು ಆಘಾತಕ್ಕೆ ಒಳಗಾಗಿಲ್ಲ. ಆದರೆ ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇವೆ. ಅದು ಪುನರಾವರ್ತನೆ ಆಗಲು ಅವಕಾಶ ನೀಡುವುದಿಲ್ಲ~ ಎಂದು ಅವರು ಹೇಳಿದ್ದಾರೆ.ಆದರೆ ಶತಕಗಳ ಶತಕದ ಸಾಧನೆಗಾಗಿ ಎದುರು ನೋಡುತ್ತಿರುವ ತೆಂಡೂಲ್ಕರ್ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ. `ಸಚಿನ್ ಅನೇಕ ದಾಖಲೆ ಹೊಂದಿದ್ದಾರೆ. ಅದರಲ್ಲಿ ಇದು ಕೂಡ ಒಂದು ಆಗಲಿದೆ. ಮೈಲಿಗಲ್ಲು ಸ್ಥಾಪಿಸುವುದು ಸಚಿನ್‌ಗೆ ಅಭ್ಯಾಸವಾಗಿ ಹೋಗಿದೆ~ ಎಂದು ಅವರು ವಿವರಿಸಿದ್ದಾರೆ.ಪಾಂಟಿಂಗ್ ಶತಕಕ್ಕಾಗಿ ಕಾಯುತ್ತಿದ್ದೇವೆ: `ನಾವೀಗ ರಿಕಿ ಪಾಂಟಿಂಗ್ ಅವರು ಶತಕ ಗಳಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದೇವೆ. ಏಕೆಂದರೆ ರಿಕಿ ಕೂಡ ಈ ಕ್ರೀಡಾಂಗಣದಲ್ಲಿ ಹಿಂದೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ~ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ನುಡಿದಿದ್ದಾರೆ.`ಸಚಿನ್ ಈ ಸರಣಿ ಬಳಿಕ ಶತಕ ಗಳಿಸಲಿ. ಏಕೆಂದರೆ ಅವರ ಆ ಸಾಧನೆಯನ್ನು ನಾನು ಟಿವಿಯಲ್ಲಿ ವೀಕ್ಷಿಸಬಹುದು. ಸಚಿನ್ ಶ್ರೇಷ್ಠ ಆಟಗಾರ ಹಾಗಾಗಿಯೇ ಅವರ ವಿಕೆಟ್‌ಗೆ ಮಹತ್ವವಿದೆ. ಬೇಗ ಅವರ ವಿಕೆಟ್ ಪಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ~ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)