ಆಸ್ಟ್ರೇಲಿಯಾ ತಂಡದ ಮೇಲುಗೈ

7
ಕ್ರಿಕೆಟ್: ಆರಂಭಿಕ ಸಂಕಷ್ಟದಲ್ಲಿ ಶ್ರೀಲಂಕಾ

ಆಸ್ಟ್ರೇಲಿಯಾ ತಂಡದ ಮೇಲುಗೈ

Published:
Updated:

ಹೋಬರ್ಟ್ (ಎಪಿ): ಮೈಕ್ ಹಸ್ಸಿ (115) ಗಳಿಸಿದ ಶತಕ ಹಾಗೂ ಎಲ್ಲ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.



ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಲಂಕಾ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 87 ರನ್ ಗಳಿಸಿತ್ತು. ಇನಿಂಗ್ಸ್ ಹಿನ್ನಡೆ ತಪ್ಪಿಸಲು ಪ್ರವಾಸಿ ತಂಡ ಇನ್ನೂ 363 ರನ್ ಗಳಿಸಬೇಕಿದೆ. ತಿಲಕರತ್ನೆ ದಿಲ್ಶಾನ್ (ಅಜೇಯ 50) ಅವರನ್ನು ಹೊರತುಪಡಿಸಿ ಲಂಕಾ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.



ಇದಕ್ಕೂ ಮುನ್ನ 4 ವಿಕೆಟ್‌ಗೆ 299 ರನ್‌ಗಳಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಾ 5 ವಿಕೆಟ್‌ಗೆ 450 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಹಸ್ಸಿ ಅಜೇಯ ಶತಕ ಗಳಿಸಿದರಲ್ಲದೆ, ಮ್ಯಾಥ್ಯೂ ವೇಡ್ ಔಟಾಗದೆ 68 ರನ್ ಗಳಿಸಿದರು.



ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 131 ಓವರ್‌ಗಳಲ್ಲಿ 5 ವಿಕೆಟ್‌ಗೆ 450 (ಮೈಕಲ್ ಕ್ಲಾರ್ಕ್ 74, ಮೈಕ್ ಹಸ್ಸಿ ಔಟಾಗದೆ 115, ಮ್ಯಾಥ್ಯೂ ವೇಡ್ ಔಟಾಗದೆ 68). ಶ್ರೀಲಂಕಾ: 29.1 ಓವರ್‌ಗಳಲ್ಲಿ 4 ವಿಕೆಟ್‌ಗೆ 87 (ತಿಲಕರತ್ನೆ ದಿಲ್ಶಾನ್ ಬ್ಯಾಟಿಂಗ್ 50).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry