ಆಸ್ಟ್ರೇಲಿಯಾ ದೋಣಿ ದುರಂತ: 150 ಜನ ಜಲಸಮಾಧಿ?

7

ಆಸ್ಟ್ರೇಲಿಯಾ ದೋಣಿ ದುರಂತ: 150 ಜನ ಜಲಸಮಾಧಿ?

Published:
Updated:

ಮೆಲ್ಬರ್ನ್ (ಪಿಟಿಐ): ಪಪುವಾ ನ್ಯೂ ಗಿನಿಯಾದ ಉತ್ತರ ಕರಾವಳಿಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ದೋಣಿಯೊಂದು ಮುಳುಗಿದ್ದು, 150ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ದುರಂತ ಸಂಭವಿಸುವ ಸಂದರ್ಭದಲ್ಲಿ ಈ ನತದೃಷ್ಟ ದೋಣಿಯಲ್ಲಿ 350ಕ್ಕೂ ಹೆಚ್ಚು ಜನ ಇದ್ದರು ಎಂದು ಆಸ್ಟ್ರೇಲಿಯಾ ಪ್ರಧಾನಿ ಜ್ಯುಲಿಯಾ ಗಿಲ್ಲಾರ್ಡ್ ಹೇಳಿದ್ದಾರೆ.ಪರಿಹಾರ ಕಾರ್ಯಾಚರಣೆಯಲ್ಲಿ 200 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ದೋಣಿಯಲ್ಲಿದ್ದ ಇತರರ ಪರಿಸ್ಥಿತಿ ಕುರಿತು ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಪರಿಹಾರ ತಂಡದ ಸಮನ್ವಯಕಾರ ಕ್ಯಾಪ್ಟನ್ ನುರೂರ್ ರಹಮಾನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry