ಆಸ್ಟ್ರೇಲಿಯಾ ನಾಯಕತ್ವ:ರುಡ್ ಸ್ಪರ್ಧೆ

7

ಆಸ್ಟ್ರೇಲಿಯಾ ನಾಯಕತ್ವ:ರುಡ್ ಸ್ಪರ್ಧೆ

Published:
Updated:

ಬ್ರಿಸ್ಪೇನ್ (ಐಎಎನ್‌ಎಸ್): ಆಸ್ಟ್ರೇಲಿಯಾ ಲೇಬರ್ ಪಕ್ಷದ ನಾಯಕತ್ವಕ್ಕಾಗಿ ಸೋಮವಾರ ನಡೆಯಲಿರುವ ಮತದಾನದಲ್ಲಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರ ವಿರುದ್ಧ ಸ್ಪರ್ಧಿಸುವುದಾಗಿ ಬುಧವಾರ ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಾಜಿ ಪ್ರಧಾನಿ ಕೆವಿನ್ ರುಡ್ ಶುಕ್ರವಾರ ಇಲ್ಲಿ ಪ್ರಕಟಿಸಿದ್ದಾರೆ.ಜೂಲಿಯಾ ಅವರು ಜನತೆಯ ವಿಶ್ವಾಸ ಕಳೆದುಕೊಂಡಿದ್ದು, ಹೀಗಾಗಿ ಮುಂದಿನ ಸಂಸತ್ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕೆ ಬಹುಮತ ಪಡೆಯುವ ಉದ್ದೇಶದೊಂದಿಗೆ ಜನರ ವಿಶ್ವಾಸವನ್ನು ಮರಳಿ ಗಳಿಸಲು ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಸುತ್ತಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry