ಆಸ್ಟ್ರೇಲಿಯಾ ಪ್ರಧಾನಿಯಾಗಿ ಟೋನಿ ಅಬ್ಬಾಟ್

7

ಆಸ್ಟ್ರೇಲಿಯಾ ಪ್ರಧಾನಿಯಾಗಿ ಟೋನಿ ಅಬ್ಬಾಟ್

Published:
Updated:

ಮೆಲ್ಬರ್ನ್ (ಪಿಟಿಐ): ಲಿಬರಲ್ ಪಕ್ಷದ ನಾಯಕ ಟೋನಿ ಅಬ್ಬಾಟ್  ಆಸ್ಟ್ರೇಲಿಯಾದ 28ನೇ ಪ್ರಧಾನಿ­ಯಾಗಿ ಬುಧವಾರ ಪ್ರಮಾಣ­­ವಚನ ಸ್ವೀಕರಿಸಿದರು.ಲೆಬರ್ ಪಕ್ಷದೊಂದಿಗಿನ ಆರು ವರ್ಷಗಳ ಮೈತ್ರಿಯನ್ನು ಲಿಬರಲ್ ಪಕ್ಷ ಕಡಿದುಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. 55 ವರ್ಷದ ಅಬ್ಬಾಟ್‌ ಅವರು ಕ್ಯಾನ್‌ಬೆರಾ­ದಲ್ಲಿ ಸಂಸತ್‌ ಭವನದ ಎದುರು ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ಪ್ರಮಾಣವಚನ ಸ್ವೀಕರಿ­ಸಿದರು ಇದಲ್ಲದೇ  ಸಂಪುಟದ 41 ಸಚಿವರು ಇದೇ ಸಂದರ್ಭದಲ್ಲಿ ಪ್ರಮಾಣ­ವಚನ ಸ್ವೀಕರಿಸಿದರು. ನಂತರ ಮಾತನಾಡಿದ ಅಬ್ಬಾಟ್, ಆಸ್ಟ್ರೇಲಿಯ ಜನರ ಏಳ್ಗೆಗಾಗಿ ಆಡಳಿತ ನಡೆಸುತ್ತೇವೆ. ಸರ್ಕಾರಿ   ಸವಾಲತ್ತು ಎಲ್ಲ ವರ್ಗದ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡು­ವುದಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry