ಬುಧವಾರ, ಜೂನ್ 23, 2021
28 °C

ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ದ್ರಾವಿಡ್ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದ ರಾಹುಲ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಗುಣಗಾನ ಮಾಡಿವೆ.`ದ್ರಾವಿಡ್ ಕೇವಲ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ. ಯುವ ಜನಾಂಗವನ್ನು ತಮ್ಮತ್ತ ಸೆಳೆಯಬಲ್ಲ ವ್ಯಕ್ತಿತ್ವ ಹೊಂದಿದ್ದಾರೆ. ಬುದ್ದಿವಂತರು ಅಷ್ಟೇ ಅಲ್ಲ. ಅತ್ಯುತ್ತಮ ವಿಚಾರವಂತರೂ ಹೌದು~ ಎಂದು ಮಾಧ್ಯಮಗಳು ಶ್ಲಾಘಿಸಿವೆ.`ದ್ರಾವಿಡ್ ನಿವೃತ್ತಿ ನಿರ್ಧಾರದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಒಬ್ಬ ಅತ್ಯುತ್ತಮ ಆಟಗಾರನನ್ನು ಕಳೆದುಕೊಂಡಿದೆ. ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರು~ ಎಂದು `ಸಿಡ್ನಿ ಮಾರ್ನಿಂಗ್ ಹೆರಾಲ್ಡ್~ ಬರೆದಿದೆ. ಎಷ್ಟೇ ವೇಗದ ಬೌಲರ್‌ಗಳು ಎದುರಿಗಿದ್ದರೂ ಅವರ ಸವಾಲನ್ನು ವೆುಟ್ಟಿ ನಿಲ್ಲಬಲ್ಲ ಸಾಮರ್ಥ್ಯ ಭಾರತದ ಆಟಗಾರನಿಗೆ ಇತ್ತು. 2001ರಲ್ಲಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಜೊತೆಗೂಡಿ ಗಳಿಸಿದ 376 ರನ್‌ಗಳ ಜೊತೆಯಾಟ ಸದಾ ನೆನಪಿನಲ್ಲಿ ಉಳಿಯುವಂತದ್ದು~ ಎಂದು ಬರೆಯಲಾಗಿದೆ.`ಆಟಗಾರರು ಕ್ರೀಡಾಂಗಣದ ಹೊರಗಡೆ ಹೇಗೆ ಇರುತ್ತಾರೆ ಎನ್ನುವುದು ಮುಖ್ಯ. ದ್ರಾವಿಡ್ ಅಳವಡಿಸಿಕೊಂಡಿದ್ದ ಶಿಸ್ತನ್ನು ಮೆಚ್ಚಬೇಕು. 39 ವರ್ಷವಾದರೂ ಉತ್ತಮ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ~ ಎಂದು ಪತ್ರಿಕೆ ತಿಳಿಸಿದೆ.ರಕ್ಷಣಾತ್ಮಕವಾಗಿ ಆಡುವಲ್ಲಿ ದ್ರಾವಿಡ್ ಎತ್ತಿದ ಕೈ. ಆದರೆ, ಈ ಸಲದ ಆಸೀಸ್ ಪ್ರವಾಸದಲ್ಲಿ ಎಂಟು ಇನಿಂಗ್ಸ್‌ಗಳಲ್ಲಿ ಆರು ಸಲ ಬೋರ್ಡ್ ಆಗಿದ್ದರು ಎನ್ನುವ ವಿಷಯವನ್ನೂ ಪತ್ರಿಕೆ ಗಮನ ಸೆಳೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.