ಆಸ್ಟ್ರೇಲಿಯಾ: ಮುಸ್ಲಿಂ ಮಂತ್ರಿ ವಿರುದ್ಧ ಜನಾಂಗೀಯ ನಿಂದನೆ

ಶುಕ್ರವಾರ, ಜೂಲೈ 19, 2019
26 °C

ಆಸ್ಟ್ರೇಲಿಯಾ: ಮುಸ್ಲಿಂ ಮಂತ್ರಿ ವಿರುದ್ಧ ಜನಾಂಗೀಯ ನಿಂದನೆ

Published:
Updated:

ಮೆಲ್ಬರ್ನ್ (ಪಿಟಿಐ): ಕುರಾನ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಮೊದಲ ಮುಸ್ಲಿಂ ಸಚಿವ ಈದ್ ಹುಸಿಕ್ ವಿರುದ್ಧ  ಸಾಮಾಜಿಕ ತಾಲತಾಣಗಳಲ್ಲಿ ಜನಾಂಗೀಯ ನಿಂದನಾತ್ಮಕ ಹೇಳಿಕೆಗಳು ಪ್ರಕಟಗೊಂಡಿವೆ.43 ವರ್ಷದ ಹುಸಿಕ್ ಅವರನ್ನು ಪ್ರಧಾನಿ ಕೆವಿನ್ ರುಡ್ ಅವರ ಸಂಸದೀಯ ಕಾರ್ಯದರ್ಶಿ ಹಾಗೂ ಬ್ರಾಡ್‌ಬ್ಯಾಂಡ್ ವ್ಯವಹಾರಗಳ ಕುರಿತ ಸಂಸದೀಯ ಕಾರ್ಯದರ್ಶಿಯಾಗಿ ಸೋಮವಾರ ನೇಮಕ ಮಾಡಲಾಗಿತ್ತು.ಬೋಸ್ನಿಯಾದ ವಲಸಿಗ ದಂಪತಿಯ ಪುತ್ರರಾಗಿರುವ ಹುಸಿಕ್ ಕುರಾನ್‌ನ್ನು ಕೈಯಲ್ಲಿ ಹಿಡಿದು ಪ್ರಮಾಣವಚನ ಮಾಡಿದ್ದರು.ಇಸ್ಲಾಂ ಧರ್ಮದ ಅನುಯಾಯಿಯಾಗಿ ಕುರಾನ್‌ನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದಾಗಿ ಹುಸಿಕ್ ಹೇಳಿದ್ದರು.ಆದರೆ,  ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರ ಫೇಸ್‌ಬುಕ್ ಖಾತೆಯಲ್ಲಿ ಜನಾಂಗೀಯವಾಗಿ ಹೀಯಾಳಿಸುವಂತಹ ಹಲವು ಪ್ರತಿಕ್ರಿಯೆಗಳು ಪ್ರಕಟಗೊಂಡಿವೆ.ಆದರೆ, ತಮ್ಮ ವಿರುದ್ಧದ ಜನಾಂಗೀಯ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಹುಸಿಕ್ `ಇದು ಪ್ರಜಾಪ್ರಭುತ್ವದ ಸಹಜ ಭಾಗ' ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry