ಶನಿವಾರ, ಜೂಲೈ 11, 2020
28 °C

ಆಸ್ಟ್ರೇಲಿಯಾ ಯಶಸ್ಸಿನಲ್ಲಿ ಲೀ ಪಾತ್ರ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ತಂಡವು ಮತ್ತೆ ಚಾಂಪಿಯನ್ ಪಟ್ಟವನ್ನು ಪಡೆಯುವ ನಿಟ್ಟಿನಲ್ಲಿ ವೇಗದ ಬೌಲರ್ ಬ್ರೆಟ್ ಲೀ ಮಹತ್ವದ ಪಾತ್ರ ನಿಭಾಯಿಸುವರೆಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ)ದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಗ್ರೇಗ್ ಚಾಪೆಲ್ ಅವರು ಭವಿಷ್ಯ ನುಡಿದಿದ್ದಾರೆ.ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಫೆಬ್ರುವರಿ 19ರಿಂದ ನಡೆಯಲಿರುವ ವಿಶ್ವಕಪ್‌ನಲ್ಲಿ ಲೀ ತಮ್ಮ ಪ್ರಭಾವಿ ಬೌಲಿಂಗ್‌ನಿಂದ ತಂಡಕ್ಕೆ ಬಲವಾಗಿ ನಿಲ್ಲುವರು ಎಂದಿರುವ ಚಾಪೆಲ್ ‘ದೊಡ್ಡದೊಂದು ಕೊರತೆಯ ಕಂದಕವನ್ನು ಮುಚ್ಚುವ ಶಕ್ತಿ ಅವರಿಗಿದೆ’ ಎಂದಿದ್ದಾರೆ. ‘ಲೀ ಸ್ಥಾನದಲ್ಲಿ ಬೇರೆ ಯಾರನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.