ಆಸ್ಟ್ರೇಲಿಯಾ ಯುವಕನ ದಾಖಲೆ

7
ವಿಮಾನದಲ್ಲಿ ಏಕಾಂಗಿ ವಿಶ್ವಪರ್ಯಟನೆ

ಆಸ್ಟ್ರೇಲಿಯಾ ಯುವಕನ ದಾಖಲೆ

Published:
Updated:

ಮೆಲ್ಬರ್ನ್ (ಪಿಟಿಐ): ಎಪ್ಪತ್ತು ದಿನಗಳಲ್ಲಿ ಏಕಾಂಗಿಯಾಗಿ ವಿಮಾನದಲ್ಲಿ ಜಗತ್ತನ್ನು ಸುತ್ತುವ ಮೂಲಕ ಆಸ್ಟ್ರೇಲಿಯಾದ 19 ವರ್ಷದ ಯುವಕನೊಬ್ಬ ವಿಶ್ವದಾಖಲೆ ಸೃಷ್ಟಿಸಿದ್ದಾನೆ.ರ‌್ಯಾನ್ ಕ್ಯಾಂಬೆಲ್ ಎಂಬ ಈ ಪೈಲಟ್, ಒಂದು ಎಂಜಿನ್ ಹೊಂದಿರುವ ವಿಮಾನದಲ್ಲಿ ಜಗತ್ತನ್ನು ಯಶಸ್ವಿಯಾಗಿ ಸುತ್ತಿದ್ದಾನೆ. ದಕ್ಷಿಣ ನ್ಯೂ ಸೌತ್ ವೇಲ್ಸ್‌ನ ವೊಲ್ಲೊಂಗಾಂಗ್‌ನಿಂದ ಜೂನ್ 30ರಂದು ತನ್ನ ವಿಶ್ವಪರ್ಯಟನೆ ಆರಂಭಿಸಿದ್ದ ರ‌್ಯಾನ್, 14 ವಿವಿಧ ರಾಷ್ಟ್ರಗಳ ಆಗಸದಲ್ಲಿ 200 ಗಂಟೆಗಳ ಕಾಲ ಹಾರಾಟ ನಡೆಸಿ ಶನಿವಾರ ವೊಲ್ಲೊಂಗಾಂಗ್‌ನಲ್ಲಿ ಬಂದಿಳಿದ್ದಾನೆ.

ರ‌್ಯಾನ್ ಬಳಸಿದ್ದ ಏಕೈಕ ಎಂಜಿನ್‌ನ ವಿಮಾನ 70 ದಿನಗಳಲ್ಲಿ 44,448 ಕಿ.ಮೀ.ಗಳಷ್ಟು ಸಂಚರಿಸಿದೆ ಎಂದು `ಎಬಿಸಿ ನ್ಯೂಸ್' ವರದಿ ಮಾಡಿದೆ. ಯಶಸ್ವಿಯಾಗಿ ವಿಶ್ವಪರ್ಯಟನೆ ಮಾಡಿ, ಈ ಸಾಧನೆ ಮಾಡಿರುವ ಜಗತ್ತಿನ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ರ‌್ಯಾನ್ ಪಾತ್ರರಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry