ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸೆ.30ರಂದು ಭಾರತ ತಂಡದ ಆಯ್ಕೆ

7

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸೆ.30ರಂದು ಭಾರತ ತಂಡದ ಆಯ್ಕೆ

Published:
Updated:

ಮುಂಬೈ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಚೆನ್ನೈನಲ್ಲಿ ಸೆಪ್ಟೆಂಬರ್‌ 30ರಂದು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಭಾರತದ ಪ್ರವಾಸದ ವೇಳೆ ಆಸ್ಟ್ರೇಲಿಯಾ ತಂಡದವರು ಒಂದು ಟ್ವೆಂಟಿ–20 ಹಾಗೂ ಏಳು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. ಅಕ್ಟೋಬರ್‌ ಐದರಂದು ಕಾಂಗರೂ ಪಡೆ ಭಾರತಕ್ಕೆ ಬರಲಿದೆ. ಅ.10ರಂದು ರಾಜ್‌ಕೋಟ್‌ನಲ್ಲಿ ಟ್ವೆಂಟಿ–20 ಪಂದ್ಯ ನಡೆಯಲಿದೆ.ಏಕದಿನ ಸರಣಿ ಅ.13ರಂದು ಆರಂಭವಾಗಲಿದೆ. ಪುಣೆ (ಅ,13), ಜೈಪುರ (ಅ.16), ಮೊಹಾಲಿ (ಅ.19), ರಾಂಚಿ (ಅ.23), ಕಟಕ್‌ (ಅ.26), ನಾಗಪುರ (ಅ.30) ಹಾಗೂ ಬೆಂಗಳೂರಿನಲ್ಲಿ (ನವೆಂಬರ್‌ 2) ಪಂದ್ಯಗಳು ಜರುಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry