ಆಸ್ತಿ ಕಬಳಿಸಲು ಹೊರಟವರಿಗೆ ಸಚಿವ ಸ್ಥಾನ: ದೊರೆಸ್ವಾಮಿ ಪತ್ರ

7

ಆಸ್ತಿ ಕಬಳಿಸಲು ಹೊರಟವರಿಗೆ ಸಚಿವ ಸ್ಥಾನ: ದೊರೆಸ್ವಾಮಿ ಪತ್ರ

Published:
Updated:

ಬೆಂಗಳೂರು: ಆರ್ಯವಿದ್ಯಾಶಾಲೆಯ ಆಸ್ತಿ ಕಬಳಿಸಲು ಹೊರಟಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.­ದೊರೆಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಗಾಂಧಿನಗರದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಆರ್ಯ­ವಿದ್ಯಾಶಾಲೆಯ ಅಧ್ಯಕ್ಷರಾಗಿ ಶಿವಕುಮಾರ್‌, ಖಜಾಂಚಿಯಾಗಿ ಡಿ.ಕೆ.ಸುರೇಶ್‌ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವ್ಯವಹಾರ ನಡೆದಿತ್ತು ಎಂಬುದನ್ನು ಶುಕ್ರವಾರ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.2006ರಲ್ಲಿ ಅವ್ಯವಹಾರದ ಬಗ್ಗೆ ಸಹಕಾರ ಸಂಘಗಳ ನಿಬಂಧಕರಿಗೆ ದೂರುಗಳು ಬಂದಿದ್ದವು. ಈ ಬಗ್ಗೆ ತನಿಖೆ ನಡೆಸಿದ ನಿಬಂಧಕ ಎಂ.ಜಿ.ಪಾಟೀಲ ಅವರು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು ಎಂದು ಶಿಫಾರಸು ಮಾಡಿದ್ದರು.  ಶಿವಕುಮಾರ್‌ ಅವರಿಂದಾಗಿ ವಿದ್ಯಾಶಾಲೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಇಂತಹ ವ್ಯಕ್ತಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry