ಬುಧವಾರ, ಜೂನ್ 16, 2021
22 °C

ಆಸ್ತಿ ತೆರಿಗೆ ಕಡಿಮೆ ಮಾಡಲು ಒತ್ತಾಯ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ತಿ ತೆರಿಗೆ ಕಡಿಮೆ ಮಾಡಲು ಒತ್ತಾಯ:

ಧಾರವಾಡ: ಪಾಲಿಕೆಯ ತೆರಿಗೆ ಹೆಚ್ಚಿಸಿದ್ದನ್ನು ಖಂಡಿಸಿ ತೆರಿಗೆ ಹೆಚ್ಚಳ ವಿರೋಧಿ ಸಪ್ತಾಹ ಹೋರಾಟ  ಪಾಲಿಕೆ ಪ್ರತಿಪಕ್ಷದ ನಾಯಕ ದೀಪಕ ಚಿಂಚೋರೆ ನೇತೃತ್ವದಲ್ಲಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ನಿವಾದ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ತೆರಿಗೆ ಹೆಚ್ಚಿಸಿದ್ದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೆಲ್ಲದ ಅವರ ಮನೆಯ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ, ನಂತರ ಪಾಲಿಕೆಯ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು.ಆಯುಕ್ತರು ಈ ಕುರಿತು ಚರ್ಚಿಸಲು ಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು. ತೆರಿಗೆ ಕಡಿಮೆ ಮಾಡುವವರೆಗೂ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ ಎಂದು ದೀಪಕ ಚಿಂಚೋರೆ ಸ್ಪಷ್ಟಪಡಿಸಿದರು.ವಸಂತ ಅರ್ಕಾಚಾರ, ಜಯಂತ ಸಾಗರ, ಪಾಲಿಕೆ ಸದಸ್ಯ ಯಾಸೀನ ಹಾವೇರಿಪೇಟ, ಸುಭಾಸ ಶಿಂಧೆ, ಆನಂದ ಗಂಭೀರ, ವೆಂಕಟೇಶ ರಾಯ್ಕರ್, ಪರಶುರಾಮ ಚುರಮುರಿ, ರವಿ ಸಾಂಬ್ರಾಣಿ, ನಿಜಾಮುದ್ದೀನ ರಾಹಿ, ಶೀತಲ ಪತ್ರಾವಳಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.