ಆಸ್ತಿ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಸಿದ್ದಯ್ಯ ಆದೇಶ

7

ಆಸ್ತಿ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಸಿದ್ದಯ್ಯ ಆದೇಶ

Published:
Updated:

ಬೆಂಗಳೂರು: ಬಿಬಿಎಂಪಿ ಆಯುಕ್ತರಾಗಿ ಸಿದ್ದಯ್ಯ ಅವರು ಅಧಿಕಾರ ವಹಿಸಿಕೊಂಡ ನಂತರ ಮತ್ತೆ ಆಸ್ತಿ ತೆರಿಗೆ ವಸೂಲಾತಿ ಪ್ರಾರಂಭಿಸಿದ್ದು, ತೆರಿಗೆ ಉಳಿಸಿಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ.ಈ ಹಿಂದೆ ಆಯುಕ್ತರಾಗಿದ್ದ ಕಾಲದಲ್ಲಿಯೂ ಸಿದ್ದಯ್ಯ ಅವರು ಆಸ್ತಿ ತೆರಿಗೆ ವಸೂಲು ಮಾಡಲು ಒತ್ತು ನೀಡಿದ್ದರು. ಇದೀಗ ಈ ಕಾರ್ಯವನ್ನು ಮತ್ತೆ ಆರಂಭಿಸಿದ್ದಾರೆ. ಬಿಬಿಎಂಪಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣಗಳಲ್ಲಿ ಹಲವಾರು ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ  ಸ್ಥಳಾವಕಾಶ ನೀಡಲಾಗಿದ್ದು, ದಕ್ಷಿಣ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವೊಂದರಲ್ಲೇ ರೂ 7.82 ಲಕ್ಷ ಬಾಡಿಗೆ ಬಾಕಿ ಉಳಿದಿದೆ. ಬಾಕಿ ಮೊತ್ತ ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೂ ರೂ 3.53 ಕೋಟಿ, ಸಣ್ಣ ನೀರಾವರಿ ಇಲಾಖೆ ರೂ 1.07 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ರೂ 91.29 ಲಕ್ಷ, ಕೆನರಾ ಬ್ಯಾಂಕ್ 61.63 ಲಕ್ಷ, ಲಿಡಕರ್ ಸಂಸ್ಥೆ ರೂ 28.38 ಲಕ್ಷ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರೂ 16.42 ಲಕ್ಷ, ನೈರುತ್ಯ ರೈಲ್ವೆ ರೂ 11.95 ಲಕ್ಷ ಬಾಕಿ ಉಳಿಸಿಕೊಂಡಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry