ಆಸ್ತಿ ಬದಲು ಶಿಕ್ಷಣ ನೀಡಿ: ಕೊಟ್ಟೂರು ಶ್ರೀ

7

ಆಸ್ತಿ ಬದಲು ಶಿಕ್ಷಣ ನೀಡಿ: ಕೊಟ್ಟೂರು ಶ್ರೀ

Published:
Updated:

ಜಗಳೂರು:   ಪೋಷಕರು ತಮ್ಮ ಮಕ್ಕಳಿಗಾಗಿ ಆಸಿ್ತ ಅಥವಾ ಸಂಪತ್ತನು್ನ ಸಂಪಾದಿಸುವ ಬದಲು ಶಿಕ್ಷಣ ಮತ್ತು ಸುಸಂಸ್ಕ್ರತ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸಬೇಕುಎಂದು ಕೊಟ್ಟೂರಿನ ಹಿರೇಮಠದ ರಾಜೇಂದ್ರ ಶಿವಾಚಾರ್ಯ ಸಾ್ವಮಿ ಹೇಳಿದರು.

ತಾಲ್ಲೂಕಿನ ಕಲ್ಲೇದೇವಪುರ ಗ್ರಾಮದಲ್ಲಿ ಈಚೆಗೆ ಧರ್ಮಸ್ಥಳ ಗ್ರಾಮಾಭಿವೃದಿ್ಧ ಯೋಜನೆ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದಾ್ಘಟನಾ ಸಮಾರಂಭದ ನೇತೃತ್ವವಹಿಸಿ ಅವರು ಮಾತನಾಡಿದರು.ದಿಢೀರ್‌ ಲಾಭಗಳಿಸುವ ಹಾಗೂ ಹೆಚು್ಚ ಇಳುವರಿ ಪಡೆಯುವ ಉದ್ದೇಶದಿಂದ ಭೂಮಿಗೆ ಯಥೇಚ್ಛವಾಗಿ ರಾಸಾಯನಿಕಗಳನು್ನ ಸುರಿಯಲಾಗುತಿ್ತದೆ. ಇದರಿಂದ ಕೃಷಿ ಉತ್ಪನ್ನಗಳು ವಿಷಕಾರಕವಾಗುತ್ತವೆ. ಅಲ್ಲದೆ ಭೂಮಿ ಸತ್ವವನ್ನು ಕಳೆದುಕೊಳ್ಳುತ್ತದೆ. ಸಾವಯವ ಕೃಷಿ ಪದ್ಧತಿ ಅಳವಡಿಕೆಯಿಂದ ಆರೋಗ್ಯಕರ ಮತ್ತು ಶುದ್ಧವಾದ ಬೆಳೆ ಬೆಳೆಯಬಹುದು ಎಂದು ಸಾ್ವಮೀಜಿ ರೈತರಿಗೆ ಕಿವಿಮಾತು ಹೇಳಿದರು.ವೈದಾ್ಯಧಿಕಾರಿ ಡಾ.ಉಮೇಶ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ವೈಯಕಿ್ತಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒಂದು ಕುಟುಂಬಕೆ್ಕ ಒಂದು ಅಥವಾ ಎರಡು ಮಕ್ಕಳು ಸಾಕು.ಹೆರಿಗೆಯ ನಡುವೆ  ಅಂತರವನು್ನ ಕಾಯು್ದಕೊಳ್ಳಬೇಕು.  ಗರ್ಭಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಪ್ರತಿ ಮನೆಗೆ ಕಡಾ್ಡಯವಾಗಿ  ಶೌಚಾಲಯ ಸೌಲಭ್ಯ ಕಲ್ಪಿಸಿಕೊಳ್ಳಭೇಕು. ಗ್ರಾಮಬ ನೈಮರ್ಲ್ಯಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯಿ್ತ ಅಧ್ಯಕ್ಷ ಕೆ.ಟಿ. ಬಡಯ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳ್ಳಿಗಳಲ್ಲಿ ಮಹಿಳೆಯರನ್ನು ಸಂಘಟಿಸಿ ಆರ್ಥಿಕ ಸ್ವಾವಲಂಬನಾ ಕಾರ್ಯಕ್ರಮ ಗಳನು್ನ ರೂಪಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖಂಡ ನಿಜಲಿಂಗಪ್ಪ, ಸಂಸ್ಥೆಯ ಯೋಜನಾಧಿಕಾರಿ ಸುಶಾಂತ್‌, ರೇಣುಕಾರಾಜ್‌, ಪ್ರತಿನಿಧಿಗಳಾದ ರತ್ನಮ್ಮ, ಸಾವಿತ್ರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry