ಆಸ್ತಿ ವಿವರ ಬಹಿರಂಗಕ್ಕೆ ಸಿದ್ಧ: ಪೇಜಾವರ ಶ್ರೀ

ಶನಿವಾರ, ಜೂಲೈ 20, 2019
24 °C

ಆಸ್ತಿ ವಿವರ ಬಹಿರಂಗಕ್ಕೆ ಸಿದ್ಧ: ಪೇಜಾವರ ಶ್ರೀ

Published:
Updated:

ಉಡುಪಿ: `ನನ್ನ ಹಾಗೂ ಮಠದ ಆಸ್ತಿ ವಿವರವನ್ನು ಬಹಿರಂಗಪಡಿಸಲು ಸಿದ್ಧ~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಇಲ್ಲಿ ಬುಧವಾರ ಘೋಷಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಾಬಾ ರಾಮ್‌ದೇವ್ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರ ಸತ್ಯಾಸತ್ಯತೆ ಗೊತ್ತಿಲ್ಲ. ನಾನಂತೂ ನೈತಿಕತೆ ಇಟ್ಟುಕೊಂಡಿದ್ದೇನೆ~ ಎಂದರು.`ರಾಜ್ಯದ ಬಿಜೆಪಿ ಸರ್ಕಾರದಿಂದ ಲಾಭ ಪಡೆದುಕೊಂಡಿಲ್ಲ. ಭಕ್ತರು ಕೊಟ್ಟಿರುವ ಹಣದಲ್ಲಿ ಸಾಮಾಜಿಕ ಕೆಲಸ ಮಾಡಿಕೊಂಡಿದ್ದೇವೆ. ಆದರೆ ಅದು ಕಪ್ಪು ಹಣವೋ ಅಥವಾ ಇನ್ಯಾವ ಮೂಲದ ಹಣವೋ ಎನ್ನುವುದನ್ನು ನಾವು ಗಮನಿಸುವುದಿಲ್ಲ. ಆದರೆ ಹಣ ನೀಡಿದವರ ವಿವರ, ಲೆಕ್ಕಪತ್ರ ಸರಿಯಾಗಿ ಪಾಲನೆ ಮಾಡುತ್ತೇವೆ~ ಎಂದರು.ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಕೇಂದ್ರ ಸರ್ಕಾರದ ನಡುವೆ ಉಂಟಾಗಿರುವ ಗೊಂದಲ ಸರಿಪಡಿಸಲು ಮಧ್ಯಸ್ಥಿಕೆ ವಹಿಸಲು ಮೂವರು ಶ್ರೀಗಳು ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, `ಆ ಬಗ್ಗೆ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸ್ದ್ದಿದೇನೆ. ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ರವಿಶಂಕರ ಗುರೂಜಿ ಜತೆ ಸಂಪರ್ಕದಲ್ಲಿದ್ದಾರೆ. ಇದೇ 10ರಂದು ಈ ಬಗ್ಗೆ ಸಭೆ ಸೇರಿ ಮಾತುಕತೆ ನಡೆಸಲಿದ್ದೇವೆ~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry