ಆಸ್ತಿ ವಿವಾದ- ಮಹದೇವಪುರ ಬಳಿ ದಂಪತಿ ಆತ್ಮಹತ್ಯೆ

ಬುಧವಾರ, ಮೇ 22, 2019
24 °C

ಆಸ್ತಿ ವಿವಾದ- ಮಹದೇವಪುರ ಬಳಿ ದಂಪತಿ ಆತ್ಮಹತ್ಯೆ

Published:
Updated:

ಬೆಂಗಳೂರು: ಆಸ್ತಿ ವಿವಾದದ ಕಾರಣದಿಂದ ಮನನೊಂದ ದಂಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಬಳಿಯ ಪುಟ್ಟಪ್ಪಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಪುಟ್ಟಪ್ಪಲೇಔಟ್ ನಾಲ್ಕನೇ ಅಡ್ಡರಸ್ತೆ ನಿವಾಸಿ ರಾಮಚಂದ್ರರೆಡ್ಡಿ (57) ಮತ್ತು ಅವರ ಪತ್ನಿ ಯಶೋಧಮ್ಮ (50) ಆತ್ಮಹತ್ಯೆ ಮಾಡಿಕೊಂಡವರು.ದಂಪತಿ ಕುಟುಂಬ ಸದಸ್ಯರೊಂದಿಗೆ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಆ ಶೆಡ್‌ನ ಜಾಗದ ಒಡೆತನದ ವಿಷಯವಾಗಿ ರಾಮಚಂದ್ರರೆಡ್ಡಿ ಮತ್ತು ಅವರ ಅಣ್ಣ ವೀರರೆಡ್ಡಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೇ ವಿಷಯವಾಗಿ ವೀರರೆಡ್ಡಿ ಅವರು, ಸಂಜೆ ರಾಮಚಂದ್ರರೆಡ್ಡಿಯವರ ಮನೆಗೆ ಬಂದು ಜಗಳವಾಡಿ ಹೋಗಿದ್ದರು.ಇದರಿಂದ ಬೇಸರಗೊಂಡ ರಾಮಚಂದ್ರರೆಡ್ಡಿ ಅವರು ಮನೆಯಿಂದ ಹೊರ ಹೋಗಿ ಮದ್ಯ ಕುಡಿದು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದರು. ಆ ನಂತರ ಅವರು ಪತ್ನಿಯೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.ಈ ವಿಷಯ ತಿಳಿದ ದಂಪತಿಯ ಮಗ ಬಾಲಕೃಷ್ಣ ಅವರು, ಪೋಷಕರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರಿಬ್ಬರೂ ಮೃತಪಟ್ಟರು ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.ದಂಪತಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry