ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ

7

ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ

Published:
Updated:

ಪಟ್ಟಣಗಳಲ್ಲಿ, ತಾಲ್ಲೂಕು ಸ್ಥಳಗಳಲ್ಲಿ, ಜಿಲ್ಲಾ ಸ್ಥಳಗಳಲ್ಲಿ ಇತ್ತೀಚಿನ ಹತ್ತು ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು 30 ಹಾಸಿಗೆಯಿಂದ 50 ಹಾಸಿಗೆಗೆ, 50 ಹಾಸಿಗೆಯಿಂದ 100 ಹಾಸಿಗೆಯ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.ಹೀಗೆ ಮೇಲ್ದರ್ಜೆಗೇರಿಸಿದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ವಿಪರೀತವಾಗಿದೆ. ಅದರಂತೆ ಸಿಬ್ಬಂದಿ ಕೊರತೆಯೂ ಇದೆ. ಹೀಗಾಗಿ 50 ಹಾಗೂ 100 ಹಾಸಿಗೆಯ ಈ ಆಸ್ಪತ್ರೆಗಳಲ್ಲಿ ಒಳರೋಗಿಗಳ ಸಂಖ್ಯೆ ಕಡಿಮೆ.100 ಹಾಸಿಗೆಯ ಆಸ್ಪತ್ರೆಯ ಸ್ವಚ್ಛತೆಗಾಗಿ ಸಾಕಷ್ಟು ಸಿಬ್ಬಂದಿ ಬೇಕಾಗುತ್ತದೆ. ಈಗ ಕಸ ಗುಡಿಸುವವರೆ ಇಲ್ಲವಾಗಿದ್ದಾರೆ. ಧೂಳು, ಕಸದಿಂದ ತುಂಬಿ ನಿರ್ವಹಣೆ ಇಲ್ಲದೆ, ಉಪಯೋಗವಿಲ್ಲದೆ ಹಾಳು ಸುರಿಯುವಂತಾಗಿದೆ. 100 ಹಾಸಿಗೆಯ ಆಸ್ಪತ್ರೆಗೆ ಕನಿಷ್ಠ ಹತ್ತು ಜನ ತಜ್ಞ ವೈದ್ಯರು ಬೇಕು. ಈಗ ಒಂದು ಆಸ್ಪತ್ರೆಗೆ ಒಬ್ಬರೋ, ಇಬ್ಬರೋ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ರೋಗಿಗಳ ಪಾಡೇನು?

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry