ಸೋಮವಾರ, ಮೇ 10, 2021
21 °C
ಅನಧಿಕೃತ ಆಸ್ಪತ್ರೆಗಳ ಮೇಲೆ ದಾಳಿ

ಆಸ್ಪತ್ರೆಗಳಿಗೆ ಬೀಗಮುದ್ರೆ; ಔಷಧಿ ಪೊಟ್ಟಣಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯಾವುದೇ ವೈದ್ಯಕೀಯ ಅರ್ಹತೆ ಪ್ರಮಾಣಪತ್ರ ಇಲ್ಲದೇ ಆಸ್ಪತ್ರೆಗಳನ್ನು ತೆರೆದು ರೋಗಿಗಳಿಗೆ ಉಪಚರಿಸುತ್ತಿರುವ ಖಾಸಗಿ ದವಾಖಾನೆಗಳ ಮೇಲೆ ತಹಶೀಲ್ದಾರ್ ಶಾರದಾ ಕೋಲಕಾರ ತಾಲ್ಲೂಕು ವೈದ್ಯಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಮಂಗಳವಾರ ದಾಳಿ ನಡೆಸಿ ನಕಲಿ ಖಾಸಗಿ ದವಾಖಾನೆಗೆ ಬೀಗ ಮುದ್ರೆ ಜಡಿದರು. ದವಾಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಔಷಧಿ, ಗುಳಿಗೆಗಳನ್ನು ಜಪ್ತಿ ಮಾಡಿದರು.ತಾಲ್ಲೂಕಿನ ಜನಗಾ, ಗುಂಡೋಳ್ಳಿ, ಕಾಳಗಿನಕೊಪ್ಪ ಗ್ರಾಮಗಳಲ್ಲಿ ದಾಳಿ ನಡೆಸಿ ಸುಮಾರು ಎರಡು ಗೋಣಿ ಚೀಲಗಳಷ್ಟು ಹಾಗೂ ನಾಲ್ಕು ದೊಡ್ಡ ಗಾತ್ರದ ಬಾಕ್ಸ್ ಗಳಲ್ಲಿ ಸಂಗ್ರಹಿಸಿಟ್ಟಿದ್ದ ಔಷಧಿ, ಗುಳಿಗೆ ಹಾಗೂ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಂಡರು. ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟ್ಯಾಬ್ಲಿಷಮೆಂಟ್ ಕಾಯ್ದೆಯಡಿಯಲ್ಲಿ ಜನಗಾ, ಗುಂಡೋಳ್ಳಿ, ಕಾಳಗಿನಕೊಪ್ಪ ಗ್ರಾಮದ ಮೂವರು ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.ದಾಳಿಯಲ್ಲಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸಮೀರ ಸಾನು, ಭಾರತೀಯ ವೈದ್ಯಕೀಯ ಸಂಘ ಹಳಿಯಾಳ ಶಾಖೆಯ ಅಧ್ಯಕ್ಷ ಡಾ.ಜೆ.ಎ. ಅತ್ತಾರ, ಪಿಎಸ್‌ಐ ಸಂಪತಕುಮಾರ,  ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.