ಆಸ್ಪತ್ರೆಗಳ ನಗರಿಯಾದ ಬಾಗಲಕೋಟೆ

7

ಆಸ್ಪತ್ರೆಗಳ ನಗರಿಯಾದ ಬಾಗಲಕೋಟೆ

Published:
Updated:
ಆಸ್ಪತ್ರೆಗಳ ನಗರಿಯಾದ ಬಾಗಲಕೋಟೆ

ಬಾಗಲಕೋಟೆ: ಒಂದು ಕಾಲದಲ್ಲಿ ವ್ಯಾಪಾರ- ವಹಿವಾಟಿಗೆ ಪ್ರಸಿದ್ಧವಾಗಿದ್ದ ಬಾಗಲಕೋಟೆ ನಗರ ದಿನಗಳೆದಂತೆ ಪ್ರಮುಖ ವಿದ್ಯಾಕೇಂದ್ರ ವಾಗಿ ಬೆಳೆದಿರುವ ಜೊತೆಗೆ ಗುಣಮಟ್ಟದ ವೈದ್ಯ ಕೀಯ ಸೇವೆಗಳನ್ನು ಕಲ್ಪಿಸುವ ಮೂಲಕ ಇದೀಗ `ಆಸ್ಪತ್ರೆಗಳ ನಗರಿ~ ಎಂಬ ಖ್ಯಾತಿಗೆ ಒಳಗಾಗಿದೆ.ಬಾಗಲಕೋಟೆ ನಗರವೊಂದರಲ್ಲೇ 113 ಖಾಸಗಿ ಆಸ್ಪತ್ರೆಗಳು (ಹಳೆ ನಗರದಲ್ಲಿ 82, ನವನಗರದಲ್ಲಿ 16 ಮತ್ತು ವಿದ್ಯಾಗಿರಿಯಲ್ಲಿ 11, ಶಿಕ್ಕೇರಿ ಕ್ರಾಸ್‌ನಲ್ಲಿ 2)  ಕಾರ್ಯ ನಿರ್ವಹಿ ಸುತ್ತಿವೆ. ಇವುಗಳ ಜೊತೆಗೆ  ಬಸವೇಶ್ವರ ವಿದ್ಯಾ ವರ್ದಕ ಸಂಘದ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆ ಮತ್ತು 50 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಸಹ ಉತ್ತಮ ಸೇವೆಗೆ ಪ್ರಸಿದ್ಧಿ ಗಳಿಸಿವೆ. ಈ ಕಾರಣಕ್ಕಾಗಿಯೇ ಬಾಗಲಕೋಟೆ ನಗರಕ್ಕೆ ಇತ್ತೀಚಿನ ದಿನಗಳಲ್ಲಿ `ಮಿನಿ ಮಿರಜ್~ ಎಂಬ ಅನ್ವರ್ಥ ಹುಟ್ಟಿಕೊಂಡಿದೆ.ಬಾಗಲಕೋಟೆಯಲ್ಲಿ ಹೆಸರಿಗಷ್ಟೇ ಆಸ್ಪತ್ರೆಗಳು ತಲೆ ಎತ್ತದೇ ಪ್ರತಿಯೊಂದು ಆಸ್ಪತ್ರೆ ಗಳು ನಿರ್ದಿಷ್ಟ ರೋಗಕ್ಕೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧಿ ಗಳಿಸಿವೆ. ಅಲ್ಲದೇ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನತೆಗೆ ನೀಡುವ ಮೂಲಕ `ಆರೋಗ್ಯಕರ~ ಪೈಪೋಟಿಯಲ್ಲಿ ತೊಡಗಿವೆ.ನಗರದ ಪ್ರಖ್ಯಾತ ವೈದ್ಯರಾದ ಡಾ. ಬಿ.ಎಚ್. ಕೆರೂಡಿ, ಡಾ. ಸುಭಾಷ್ ಪಾಟೀಲ, ಡಾ. ದೇವ ರಾಜ ಪಾಟೀಲ, ಡಾ. ಆರ್.ಟಿ. ಪಾಟೀಲ, ಡಾ. ಎಂ.ಎಸ್. ದಡ್ಡೇನವರ, ಡಾ. ಕಿರಣ ಕಂಠಿ, ಡಾ. ಬರಗಿ ಇನ್ನು ಪ್ರಮುಖರಾಗಿ  ಗುರುತಿಸಬ ಹುದಾದ ವೈದ್ಯರ ದಂಡು  ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಕೈಗುಣದಿಂದ ಪ್ರಸಿದ್ಧಿ ಗಳಿಸಿದ್ದಾರೆ.ದಂತ, ನೇತ್ರ, ಹೆರಿಗೆ, ನರರೋಗ, ಸಾಮಾನ್ಯ ಕಾಯಿಲೆ ಇತ್ಯಾದಿ ಹತ್ತು ಹಲವಾರು ರೋಗಗಳಿಗೆ  ಚಿಕಿತ್ಸೆ ನೀಡುವ ಪ್ರತಿ ಆಸ್ಪತ್ರೆ ಯಲ್ಲೂ  ಪ್ರತಿದಿನ ತುಂಬಿರುತ್ತದೆ.ಹಳೆ ಬಾಗಲಕೋಟೆ ನಗರದಲ್ಲಿ ಅದರಲ್ಲೂ ಕೆರೂಡಿ, ಧನುಷ್, ಸುಭಾಶ ಪಾಟೀಲ, ದಡ್ಡೇನ ವನವರ ಆಸ್ಪತ್ರೆಗಳ ಆವರಣದಲ್ಲಿ ಸಂಚರಿಸು ವಾಗ ಯಾರನ್ನಾದರೂ ಮಾತನಾಡಿಸಿದರೆ ಅವರು ಒಂದೊ ರೋಗಿಯಾಗಿರಬೇಕು ಇಲ್ಲವೇ ರೋಗಿಗಳನ್ನು ನೋಡಿಕೊಳ್ಳಲು ಆಗಮಿಸಿರುವ ಕುಟುಂಬದವರಾಗಿರ ಬೇಕು, ಇವರಾರೂ ಅಲ್ಲದಿದ್ದರೆ ವೈದ್ಯರು ಇಲ್ಲವೆ ನರ್ಸ್ ಆಗಿರು ತ್ತಾರೆ!. ಅಷ್ಟರ ಮಟ್ಟಿಗೆ ಬಾಗಲಕೋಟೆಯ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ  ಏರಿಕೆಯಾಗಿದೆ. ಜಿಲ್ಲೆಯ ಮೂಲೆ ಮೂಲೆಯಿಂದ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಬಾಗಲಕೋಟೆ ನಗರಕ್ಕೆಚಿಕಿತ್ಸೆ ಅರಸಿ ಬಂದು ಗುಣಮುಖ ವಾಗುತ್ತಿದ್ದಾರೆ.ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007ರನ್ವಯ ಪ್ರತಿ ಆಸ್ಪತ್ರೆಗಳು ನೋಂದಾ ಯಿಸಿಕೊಂಡು, ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿವೆ. ಹುಬ್ಬಳ್ಳಿ, ಬೆಳಗಾವಿ, ಬೆಂಗ ಳೂರು, ಮಿರಜ್‌ನಂತಹ ನಗರಗಳಲ್ಲಿ ಸಿಗುವ ಆರೋಗ್ಯ ಸೇವೆಗಳು ನಗರದಲ್ಲಿ ಜನತೆಗೆ ದೊರೆಯುತ್ತಿ ರುವ ಕಾರಣ  ದೂರದ ನಗರಗಳಿಗೆ ಹೋಗುವ ಸಮಯ, ಹಣ ಉಳಿತಾಯವಾಗುತ್ತಿದೆ ಎಂದರು.ವೈದ್ಯರು  ರೋಗಿಗಳನ್ನು ಆತ್ಮೀಯವಾಗಿ ಕಾಣುವುದರಿಂದ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾರಣ ಜನತೆ ಬಾಗಲಕೋಟೆ ಯನ್ನೇ ಚಿಕಿತ್ಸೆಗೆ ಆಯ್ದುಕೊಳ್ಳು ತ್ತಿದ್ದಾರೆ ಎಂದರು. ಖಾಸಗಿ ಆಸ್ಪತ್ರೆಗಳು ಕೇವಲ ಹಳೆ ಬಾಗಲ ಕೋಟೆಯನ್ನು  ಕೇಂದ್ರಿತವಾಗಿಟ್ಟು ಕೊಳ್ಳದೇ ನವನಗರದಲ್ಲಿ ಆರಂಭವಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ವೈದ್ಯ ಕೀಯ ಕಾಲೇಜು ರಾಷ್ಟ್ರಮಟ್ಟದಲ್ಲಿ ಬಾಗಲ ಕೋಟೆ ನಗರವನ್ನು ಆಕರ್ಷಿಸುವ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಕಾರಣ ದಿನದಿಂದ ದಿನಕ್ಕೆ ಬಾಗಲಕೋಟೆ ವೈದ್ಯಕೀಯ ರಂಗದಲ್ಲಿ ಪ್ರಸಿದ್ಧಿ ಗಳಿಸಲು ಕಾರಣವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry