ಬುಧವಾರ, ಮೇ 25, 2022
30 °C

ಆಸ್ಪತ್ರೆಗಳ ಮೇಲೆ ಸೇವಾ ತೆರಿಗೆ ಸದ್ಯಕ್ಕೆ ವಾಪಸ್: ಪ್ರಣವ್ ಮುಖರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಲ್ಲ ಕಡೆಗಳಿಂದ ಬಂದ ಒತ್ತಾಯಕ್ಕೆ ಮಣಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು,  25 ಹಾಸಿಗೆಗಳಿಗಿಂತ ಹೆಚ್ಚಿನ ಹವಾನಿಯಂತ್ರಿತ ಆಸ್ಪತ್ರೆಗಳು ಮತ್ತು ರೋಗನಿದಾನ (ರೋಗ ಪತ್ತೆ) ಸೇವೆಗಳ ಮೇಲಿನ ಶೇಕಡಾ 5ರ ಪ್ರಸ್ತಾವಿತ ಸೇವಾ ತೆರಿಗೆಯನ್ನು ಹಿಂತೆಗೆದುಕೊಂಡಿರುವುದಾಗಿ ಮಂಗಳವಾರ ಪ್ರಕಟಿಸಿದರು.ಮುದ್ರೆ ಹಾಕಿದ ಕೆಲವು ಉಡುಪುಗಳು ಮತ್ತು ಜವುಳಿ ಉತ್ಪನ್ನಗಳ ಬಿಡಿ ದರದ ಮೇಲೆ ವಿಧಿಸಲಾಗುವ ತೆರಿಗೆಯನ್ನೂ ತಗ್ಗಿಸುವ ಮೂಲಕ ಕೆಲವು ಸಿದ್ಧ ಉಡುಪು ಉತ್ಪಾದಕರಿಗೂ ಕೊಂಚ ಪರಿಹಾರವನ್ನು ಅವರು ನೀಡಿದರು.ಆರೋಗ್ಯ ಸೇವೆಗಳ ಮೇಲೆ ಸುಂಕ ಹೇರುವ ಪ್ರಸ್ತಾವ ಕೇವಲ ಕಂದಾಯ ಕ್ರೋಡೀಕರಣ ಉದ್ದೇಶದ್ದಲ್ಲ. ಅದು ವಸ್ತುಗಳು ಮತ್ತು ಸೇವಾತೆರಿಗೆ (ಜಿಎಸ್ ಟಿ) ಅನುಷ್ಠಾನಕ್ಕೆ ದಾರಿ ಮಾಡಿ ಕೊಡುವ ಉದ್ದೇಶದ್ದು ಎಂದು ಮುಖರ್ಜಿ ನುಡಿದರು.~ಇದೇನಿದ್ದರೂ, ವಸ್ತುಗಳು ಮತ್ತು ಸೇವಾತೆರಿಗೆ (ಜಿಎಸ್ ಟಿ) ಬರುವವರೆಗೆ ಆಸ್ಪತ್ರೆಗಳ ಸೇವೆಗಳು ಮತ್ತು ರೋಗ ನಿದಾನ ಪರೀಕ್ಷೆಗಳಿಗೆ ಸಂಪೂರ್ಣ ವಿನಾಯ್ತಿ ನೀಡಲು ನಾನು ನಿರ್ಧರಿಸಿದ್ದೇನೆ~ ಎಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಅಂಗೀಕರಿಸುವ ಸಲುವಾಗಿ ಮಂಡಿಸುತ್ತಾ ಪ್ರಣವ್ ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.