ಸೋಮವಾರ, ಆಗಸ್ಟ್ 26, 2019
20 °C

ಆಸ್ಪತ್ರೆಗೆ ಬೆಂಕಿ ಹಚ್ಚಿದ್ದ ಶುಶ್ರೂಷಕನಿಗೆ ಜೀವಾವಧಿ ಶಿಕ್ಷೆ

Published:
Updated:

ಸಿಡ್ನಿ (ಎಎಫ್‌ಪಿ): ಇಲ್ಲಿನ ಆಸ್ಪತ್ರೆಯಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ, 11 ಜನರ ಸಾವಿಗೆ ಕಾರಣವಾಗಿದ್ದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರೋಜರ್ ಡೀನ್ ಎಂಬ ನರ್ಸ್ 2001ರಲ್ಲಿ ಈ ಕೃತ್ಯ ಎಸಗಿದ್ದ. ವಿಚಾರಣೆ ಸಂದರ್ಭದಲ್ಲಿ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದ ಆತ, ಕೆಲವು `ದುಷ್ಟ ವಿಚಾರಗಳಿಂದ' ಪ್ರೇರಿತನಾಗಿ ಹಾಗೆ ಮಾಡಿದ್ದಾಗಿ ತಿಳಿಸಿದ್ದ. ರೋಜರ್‌ನ ಈ ಕೃತ್ಯ `ಹೇಯ' ಎಂದು ಬಣ್ಣಿಸಿದ ನ್ಯಾಯಾಧೀಶರಾದ ಮೆಗನ್ ಲತಮ್, `ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಆಸ್ಪತ್ರೆಯಲ್ಲಿ ಸಂಭವಿಸಿದ ಅನಾಹುತವು ಕಲ್ಪನೆಗೂ ನಿಲುಕದಂಥದ್ದು' ಎಂದು ಪ್ರತಿಕ್ರಿಯಿಸಿದರು.

Post Comments (+)