ಭಾನುವಾರ, ಫೆಬ್ರವರಿ 23, 2020
19 °C

ಆಸ್ಪತ್ರೆಯಿಂದ ಮನೆಗೆ ಅಣ್ಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆಯಿಂದ ಮನೆಗೆ  ಅಣ್ಣಾ

ಮುಂಬೈ : ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಬೆಳಿಗ್ಗೆ ಇಲ್ಲಿನ ಆಸ್ಪತ್ರೆಯಿಂದ ಸ್ವಗ್ರಾಮ ರಾಳೇಗಣಸಿದ್ಧಿಗೆ ತೆರಳಿದರು. ಆರೋಗ್ಯದ ಸಮಸ್ಯೆಗಳು ಸುಧಾರಣೆ ಹೊಂದಿದ ಬಳಿಕ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಆರಂಭಿಸಿದ ಚಳವಳಿಯ ಮುಂದಿನ ಹಂತದ  ಸ್ವರೂಪದ ಬಗ್ಗೆ ಚಿಂತಿಸುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದರು.

`ನಾನೀಗ ಸರಿಹೋಗಿದ್ದೇನೆ. ಆದರೆ ಈಗಲೂ ನಿಶ್ಯಕ್ತಿ ಇದೆ. ವೈದ್ಯರು ಸಲಹೆ ಮಾಡಿದಂತೆ ಕನಿಷ್ಟ ಒಂದು ತಿಂಗಳವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ.  ಪೂರ್ಣ ಗುಣಮುಖನಾದ ಮೇಲೆ ಚಳವಳಿಯ ಬಗ್ಗೆ ಚಿಂತಿಸುತ್ತೇನೆ~ ಎಂದು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಅವರ ಮುಂದಿನ ನಡೆಯ ಕುರಿತು ಕೇಳಲಾದ ಪ್ರಶ್ನೆಗೆ ಹಜಾರೆ ವರದಿಗಾರರಿಗೆ ಉತ್ತರಿಸಿದರು.

ತಮ್ಮ ತಂಡದ ಸದಸ್ಯರ ವಿರುದ್ಧ ಹೊರಿಸಲಾದ ಭ್ರಷ್ಟಾಚಾರದ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಅಣ್ಣಾ, `ಹತ್ತು ದಿನಗಳಿಂದ ಹೊರಜಗತ್ತಿನ ಸಂಪರ್ಕ ನನಗೆ ಇರಲಿಲ್ಲ~ ಎಂದರು. ಈ ಕುರಿತಂತೆ ಉತ್ತರ ನೀಡಲು ಅವರು ನಿರಾಕರಿಸಿದರು.

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ  ಪ್ರವಾಸದ ಕುರಿತಂತೆ ಮಾತನಾಡಿದ ಅಣ್ಣಾ, ವೈದ್ಯರ ಸಲಹೆಯ ಪ್ರಕಾರ ಈ ಸಮಯದಲ್ಲಿ ಪ್ರವಾಸ ಮಾಡಲು ತಾವು ಸಮರ್ಥರಾಗಿಲ್ಲ ಎಂದರು. `ಭ್ರಷ್ಟಾಚಾರದ ವಿರುದ್ಧದ ಹೋರಾಟ ಒಂದು ದಿನದ್ದಲ್ಲ. ಇದು ದೀರ್ಘ ಕಾಲದ ಯುದ್ಧ.

ನಾನು 25 ವರ್ಷಗಳಿಂದ ಅದರ ವಿರುದ್ಧ ಹೋರಾಡುತ್ತಿದ್ದೇನೆ. ವೈದ್ಯರ ಸಲಹೆಯ ಪ್ರಕಾರ ನಾನು ವಿಶ್ರಾಂತಿ ಪಡೆಯುತ್ತೇನೆ.  ಗುಣಮುಖನಾದ ಬಳಿಕ ಹೊರಗೆ ಕಾಣಿಸಿಕೊಳ್ಳುತ್ತೇನೆ~ ಎಂದು ಹೇಳಿದರು. ಅಣ್ಣಾ ಪುಣೆಯ ಸಂಚೇತಿ ಆಸ್ಪತ್ರೆಗೆ ಶ್ವಾಸಕೋಶ ನಾಳದ ಸೋಂಕಿಗೆ ಚಿಕಿತ್ಸೆ ಪಡೆಯಲು ಡಿ. 31ರಂದು ದಾಖಲಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)