ಆಸ್ಪತ್ರೆಯಿಂದ ಮನೆಗೆ ವಾಪಸಾದ ಅಮಿತಾಭ್

7

ಆಸ್ಪತ್ರೆಯಿಂದ ಮನೆಗೆ ವಾಪಸಾದ ಅಮಿತಾಭ್

Published:
Updated:

ಮುಂಬೈ (ಪಿಟಿಐ): ಉದರ ಶಸ್ತ್ರ ಚಿಕಿತ್ಸೆಗಾಗಿ ಕಳೆದ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ ಬಿ ಅಮಿತಾಭ್ ಬಚ್ಚನ್ ಗುರುವಾರ ರಾತ್ರಿ ಮನೆಗೆ ವಾಪಸಾಗಿದ್ದಾರೆ.`ಆಸ್ಪತ್ರೆಯಿಂದ ಕುಟುಂಬದವರೊಂದಿಗೆ ಈಗ ಮನೆಗೆ ಬಂದೆ. ಶಸ್ತ್ರ ಚಿಕಿತ್ಸೆ ದುಃಖ ಮತ್ತು ಅತೀವ ನೋವು ಉಂಟು ಮಾಡಿತು. ಆದರೆ ಕೊನೆಗೂ ನೋವು ಉಂಟು ಮಾಡುತ್ತಿದ್ದ ಗ್ರಂಥಿ ತೆಗೆಯಲಾಯಿತು.  ದೇವರ ಆಶೀರ್ವಾದ ಮತ್ತು ಜನರ ಪ್ರಾರ್ಥನೆ ನನಗೆ ಮರು ಜನ್ಮ ನೀಡಿದವು. ಎಲ್ಲರಿಗೂ ನನ್ನ ಧನ್ಯವಾದ   ಗಳು~ ಎಂದು ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡ 7 ಹಿಲ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನಗು ನಗುತ್ತಲೇ ನನ್ನನ್ನು ಬೀಳ್ಕೊಟ್ಟರು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry