ಶುಕ್ರವಾರ, ಏಪ್ರಿಲ್ 23, 2021
24 °C

ಆಸ್ಪತ್ರೆ ಸಿಬ್ಬಂದಿಗಾಗಿ ಅರೆಬೆ್ತೆಲೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ಜಯ ಕರ್ನಾಟಕ ಕಾರ್ಯಕರ್ತರು ವೈದ್ಯರ ನೇಮಕಾತಿಗೆ ಆಗ್ರಹಿಸಿ ಇಲ್ಲಿನ ಸರಕಾರಿ ಆಸ್ಪತ್ರೆ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 3ನೇ ದಿನಕ್ಕೆ ಕಾಲಿಟ್ಟಿತು.ತಮ್ಮ ಹೋರಾಟಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಅರೆಬೆತ್ತಲೆ ಧರಣಿ ನಡೆಸುವುದಾಗಿ ಸಂಘಟನೆಯ ತಾಲ್ಲೂಕು ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಪಂಡಿತ ಮೇಲಿನಮನಿ ತಿಳಿಸಿದರು.

ಅರೆಬೆತ್ತಲೆ ಮೆರವಣಿಗೆಯಲ್ಲಿ ಚಂದ್ರಶೇಖರ ಕೆರೂಟಗಿ, ಬಸವರಾಜ ಗುಡಿಸಲಮನಿ, ರೇವಣಸಿದ್ದಯ್ಯ ಹಿರೇಮಠ, ಸಿದ್ಧರಾಮ ಹಡಪದ, ಯಮನಪ್ಪ ಹೊಸಮನಿ, ವೆಂಕಪ್ಪ ಭೋವಿ, ನಬಿಲಾಲ ಮುಲ್ಲಾ, ಬಂದೇನವಾಜ ನಾಯ್ಕೋಡಿ, ಮುತ್ತಪ್ಪ ಬೆಕಿನಾಳ, ಮಲಂಗಷಾ ಮಕಾನದಾರ, ಶಕೀಲ ಮುಜಾವರ ಪಾಲ್ಗೊಂಡಿದ್ದರು.

ತಾಲ್ಲೂಕು ವೈದ್ಯಾಧಿಕಾರಿ ಆರ್.ಎಂ. ಬರಗಿ ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ತಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡದ ಹೊರತು ಮಾತು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಸದ್ಯ ಅಗತ್ಯ ವೈದ್ಯರನ್ನು ನೀಡಲಾಗುವುದು. ಉಳಿದ ಸಿಬ್ಬಂದಿಯನ್ನು ಶೀಘ್ರ ನಿಯೋಜಿಸುವುದಾಗಿ ಭರವಸೆ ನೀಡಿದರು.ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಮಣಗಿರಿ ಮಾತನಾಡಿ, ಭರವಸೆಯಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಆಸ್ಪತ್ರೆಗೆ ಕನಿಷ್ಠ ಏಳು ವೈದ್ಯರನ್ನು ನೇಮಕ ಮಾಡಬೇಕು. ಅಲ್ಲಿಯವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

ದಂ.ಸ.ಸ ಬೆಂಬಲ: ಜಯ ಕರ್ನಾಟಕ ಸಂಘಟನೆಯ ಹೋರಾಟಕ್ಕೆ ಡಾ. ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ತಮಟೆ ಬಾರಿಸಿ ಮೆರವಣಿಗೆ ನಡೆಸಿ, ಬೆಂಬಲ ಸೂಚಿಸಿದರು.

ಸಂಘದ ಸದಸ್ಯರಾದ ಶಿವಕುಮಾರ ಮೇಲಿನಮನಿ, ರಾಜು ಮೇತ್ರಿ, ಜೈಭೀಮ ನಾಯ್ಕೋಡಿ, ಮುತ್ತು ಎಂಟಮಾನ, ಶಿವಾನಂದ ಮೇಲಿನಮನಿ, ಮಹದೇವ ದಾಳಿ, ಅಶೋಕ ಪೂಜಾರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ದೇವರಮನಿ ಬೆಂಬಲ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಅಯೂಬ್ ದೇವರಮನಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಮಣಗೇರಿ, ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ಪಂಡಿತ ಮೇಲಿನಮನಿ, ಆಲಮೇಲ ವಲಯ ಘಟಕದ ಅಧ್ಯಕ್ಷ ಚಂದ್ರಶೇಖರ ಕೆರೂಟಗಿ, ರೇವಣಸಿದ್ದಯ್ಯ ಹಿರೇಮಠ, ಅಕ್ಕಮಹಾದೇವಿ ಹಿರೇಮಠ, ಅನ್ವರ್ ಮದಭಾವಿ, ಸಿದ್ಧರಾಮ ಹಡಪದ, ಖಾಜಪ್ಪ ಜಮಾದಾರ, ಈರಣ್ಣ ಲಾಳಸಂಗಿ, ಬಸವರಾಜ ಬೋರಾವತ್, ಪಿಂಟು ಬಂಡಗಾರ, ಚಂದ್ರಕಾಂತ ಅಳ್ಳಗಿ, ಸೈಫನ್ ಜಮಾದಾರ, ಆಸೀಸ್ ಮುಲ್ಲಾ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.