ಆಹಾರದ ವೇಳೆ ಬದಲಾದರೆ ಸ್ಥೂಲಕಾಯ

7

ಆಹಾರದ ವೇಳೆ ಬದಲಾದರೆ ಸ್ಥೂಲಕಾಯ

Published:
Updated:

ಲಂಡನ್ (ಪಿಟಿಐ): ಕೊಬ್ಬಿನಾಂಶದಿಂದ ಕೂಡಿರುವ ಆಹಾರವನ್ನು ತಿನ್ನುವುದರಿಂದ ಜನರು ಸ್ಥೂಲಕಾಯದವರಾಗುತ್ತಾರೆ ಎನ್ನುವುದು ಹಳೆಯ ವಿಷಯ.ಜನರು ಆಹಾರವನ್ನು ರಾತ್ರಿ ಹೊತ್ತಿನಲ್ಲಿ ಸರಿಯಾದ ಸಮಯಕ್ಕೆ ಸೇವಿಸದೆ  ರಾತ್ರಿ ಬಹಳ ಹೊತ್ತಾದ ನಂತರ ಸೇವಿಸಿದರೆ ಸ್ಥೂಲಕಾಯದವರಾಗುತ್ತಾರೆ ಎನ್ನುವುದು ಭಾರತೀಯ ವಿಜ್ಞಾನಿಗಳು ನಡೆಸಿರುವ ನೂತನ ಅಧ್ಯಯನದಿಂದ ತಿಳಿದು ಬಂದಿದೆ.ಕ್ಯಾಲಿಫೋರ್ನಿಯಾದ ಜೈವಿಕ ವಿಜ್ಞಾನದ ಸಲ್ಕಾ ಸಂಸ್ಥೆಯ ಭಾರತೀಯ ವಿಜ್ಞಾನಿಗಳು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ಇದು ಗೊತ್ತಾಗಿದೆ. ಜನರು ರಾತ್ರಿ ಇಂಟರ್‌ನೆಟ್ ಬಳಸುತ್ತಾ ಅಥವಾ ಚಲನಚಿತ್ರಗಳನ್ನು ವೀಕ್ಷಿಸುತ್ತಾ ತಿನ್ನುತ್ತಾ ಇದ್ದರೆ ತೂಕ ಅಧಿಕವಾಗುತ್ತದೆ ಎಂದು ಹೇಳಿದ್ದಾರೆ.ಈ ಸಂಶೋಧನಾ ತಂಡದ ನೇತೃತ್ವ  ವಹಿಸಿದ ಸಹಾಯಕ ಪ್ರಾಧ್ಯಾಪಕ ಡಾ. ಸಚ್ಚಿದಾನಂದ ಪಾಂಡಾ ಅವರ ಪ್ರಕಾರ ದಿನದ ಕೆಲವು ಸಮಯಗಳಲ್ಲಿ ದೇಹದ ಕರುಳು, ಪಿತ್ತಜನಕಾಂಗ ಹಾಗೂ ಸ್ನಾಯುಗಳು ಹೆಚ್ಚು ಚುರುಕಾಗಿ ಕಾರ್ಯನಿರ್ವಹಿಸುತ್ತವೆ. ಉಳಿದ ಸಮಯ `ನಿದ್ರಾಸ್ಥಿತಿ~ಯಲ್ಲಿರುತ್ತವೆ ಎಂದು ಹೇಳಿದ್ದಾರೆ.ಇಲಿಗಳಾಗಲಿ ಅಥವಾ ವ್ಯಕ್ತಿಯಾಗಲಿ ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ನಿಗದಿತ ಸಮಯವನ್ನು  ಹೊರತು ಪಡಿಸಿ ತಿಂದರೆ ದೇಹದ ತೂಕ ಅಧಿಕವಾಗುತ್ತದೆ ಎಂದು ಡಾ. ಪಾಂಡಾ ಹೇಳಿದ್ದಾರೆ. ಒಂದೇ ಪ್ರಮಾಣದ ಆಹಾರವನ್ನು  ಒಂದು ಗುಂಪಿನ ಇಲಿಗಳಿಗೆ ಎಂಟು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದು, ಮತ್ತೊಂದು ಗುಂಪಿನ ಇಲಿಗಳಿಗೆ ಅಷ್ಟೇ ಪ್ರಮಾಣದ ಆಹಾರವನ್ನು ದಿನದ ಯಾವಾಗ ಬೇಕಾದರೂ ತಿನ್ನಲು ಬಿಟ್ಟ ಕಾರಣ ಅವುಗಳ ದೇಹದ ತೂಕ ಅಧಿಕವಾಯಿತು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry