ಆಹಾರ ಧಾನ್ಯ ಸಂಗ್ರಹಣೆ ಸಾಮರ್ಥ್ಯ ಹೆಚ್ಚಳ

7

ಆಹಾರ ಧಾನ್ಯ ಸಂಗ್ರಹಣೆ ಸಾಮರ್ಥ್ಯ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಗೋದಾಮುಗಳಲ್ಲಿ ಆಹಾರಧಾನ್ಯ  ಸಂಗ್ರಹಣೆ  ಸಾಮರ್ಥ್ಯ  ಗಣನೀಯವಾಗಿ ಹೆಚ್ಚಿದೆ. ಇದರಿಂದ ಆಹಾರ ಧಾನ್ಯಗಳು ಹಾನಿಯಾಗಿ ನಷ್ಟವಾಗುವುದು ಗಣನೀಯವಾಗಿ ತಗ್ಗಿದೆ ಎಂದು ಆಹಾರ ಸಚಿವ ಕೆ.ವಿ ಥಾಮಸ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.2002-03ನೇ ಸಾಲಿನಲ್ಲಿ 1.35 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ನಷ್ಟವಾಗಿತ್ತು. 2011-12ರಲ್ಲಿ ಇದು 0.014 ಲಕ್ಷ ಟನ್‌ಗಳಿಗೆ ಇಳಿಕೆ ಕಂಡಿದೆ. 2005ರಲ್ಲಿ ಸರ್ಕಾರಿ ಗೋದಾಮುಗಳಲ್ಲಿ 50 ರಿಂದ 60 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಬಹುದಿತ್ತು. ಈಗ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಬರುವ ಸಂಪೂರ್ಣ ಆಹಾರ ಧಾನ್ಯ ಸಂಗ್ರಹಿಸಿಡುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry