ಆಹಾರ ಪಥ್ಯ: ತಿಂಗಳಲ್ಲಿಯೇ ಅಪಥ್ಯ!
ಲಂಡನ್(ಪಿಟಿಐ): ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಆಹಾರ ಪಥ್ಯದ (ಡಯಟ್) ಮೊರೆ ಹೋಗುತ್ತಾರೆ. ಆದರೆ ಇಂಥವರಲ್ಲಿ ಸುಮಾರು ಅರ್ಧದಷ್ಟು ಮಂದಿ ತಿಂಗಳಿಗಿಂತಲೂ ಹೆಚ್ಚು ಕಾಲ ಇದನ್ನು ಪಾಲಿಸುವುದು ಕಷ್ಟ ಎನ್ನುತ್ತದೆ ಬ್ರಿಟನ್ ಸಮೀಕ್ಷೆ.
ಒಂದು ತಿಂಗಳಲ್ಲಿ ಶೇ 28ರಷ್ಟು ಯುವಜನರು ಆಹಾರ ಪಥ್ಯ ಪ್ರಾರಂಭಿಸುತ್ತಾರೆ. ಇವರಲ್ಲಿ ಶೇ 45ರಷ್ಟು ಜನರು ಒಂದು ವಾರವೂ ಇದನ್ನು ಮುಂದುವರಿಸುವುದಿಲ್ಲ.
`ಡಯಟ್ ಮಾಡುವ ಶೇ 33ರಷ್ಟು ಮಂದಿ ತಾವು13 ಕೆ.ಜಿ ತೂಕ ಕಳೆದುಕೊಳ್ಳುವ ಅಗತ್ಯವಿರುವುದಾಗಿ ಒಪ್ಪಿಕೊಳ್ಳುತ್ತಾರೆ~ ಎಂದು ದೇಹ ತೂಕ ಕರಗಿಸುವ `ಸ್ಲಿಮ್ ಸ್ಟಿಕ್ಸ್~ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.
`ಈಗ ಬೊಜ್ಜಿನ ತೊಂದರೆ ಹೆಚ್ಚಾಗಿದೆ. ಇದರಿಂದ ಟೈಪ್-2 ಮಧುಮೇಹ ಹಾಗೂ ಹೃದಯದ ತೊಂದರೆ ಹೆಚ್ಚಾಗುತ್ತಿದೆ~ ಎಂದು ಆಹಾರ ತಜ್ಞೆ ಪ್ರಿಯಾ ತೆವ್ ಹೇಳುತ್ತಾರೆ. `ಕೆಲವೇ ವಾರಗಳಲ್ಲಿ ತೂಕ ಕಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಜನ ಅರ್ಥಮಾಡಿಕೊಳ್ಳಬೇಕು. ಆದರೆ ಕಟ್ಟುನಿಟ್ಟಿನ ಆಹಾರ ಪಥ್ಯದಿಂದ ಇದನ್ನು ಸಾಧಿಸಬಹುದು~ ಎಂದೂ ನುಡಿಯುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.