ಆಹಾರ ಪದ್ಧತಿಯಿಂದಲೇ ಹೃದ್ರೋಗ

7

ಆಹಾರ ಪದ್ಧತಿಯಿಂದಲೇ ಹೃದ್ರೋಗ

Published:
Updated:

ಷಿಕಾಗೊ (ಪಿಟಿಐ): ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾದ ಜನರಲ್ಲಿ ಹೆಚ್ಚುತ್ತಿರುವ ಹೃದ್ರೋಗ ಮತ್ತು ಮಧುಮೇಹ ರೋಗಕ್ಕೆ ಕಾರಣ ಕಂಡು ಹಿಡಿಯುವ ಸಲುವಾಗಿ ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಧ್ಯಯನವೊಂದನ್ನು ನಡೆಸಿದ್ದು, ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹೃದ್ರೋಗಕ್ಕೆ ಹೆಚ್ಚು ಕಾರಣ ಎಂದು `ಮಸಾಲಾ~ ಹೆಸರಿನ ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನ್ಯಾಷನಲ್ ಹಾರ್ಟ್ ಲಂಗ್ ಅಂಡ್ ಬ್ಲಡ್ ಇನ್‌ಸ್ಟಿಟ್ಯೂಟ್ ಸುಮಾರು 16 ತಿಂಗಳ ಕಾಲ ಇದಕ್ಕೆ ಸಂಬಂಧಿಸಿದ ಅಧ್ಯಯನ, ಸಮೀಕ್ಷೆ, ಸಂಶೋಧನೆ ನಡೆಸಿದೆ. ದಕ್ಷಿಣ ಏಷ್ಯಾ ಜನರ ವಂಶವಾಹಿ, ಸಾಮಾಜಿಕ ಸ್ಥಿತಿಗತಿ, ಪರಿಸರ ಮತ್ತು ನಡವಳಿಕೆ ಅಂಶಗಳು ಮತ್ತು ಆಹಾರ ಪದ್ಧತಿ ಎಷ್ಟರ ಮಟ್ಟಿಗೆ ಹೃದ್ರೋಗಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅಧ್ಯಯನದ ಪ್ರಮುಖ ಉದ್ದೇಶವಾಗಿತ್ತು.ಹೃದ್ರೋಗ ಮತ್ತು ಮಧುಮೇಹ ರೋಗಗಳಿಗೆ ನಿಖರವಾದ ಕಾರಣಗಳನ್ನು ಪತ್ತೆ ಮಾಡಿದರೆ ಮುಂದೆ ಚಿಕಿತ್ಸೆ ಹಾಗೂ ರೋಗ ನಿಯಂತ್ರಿಸುವುದಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸಲು ಸಹಾಯವಾಗುತ್ತದೆ ಎಂದು ನಾರ್ತ್‌ವೆಸ್ಟ್ರನ್ ವಿವಿಯ ಫೆಯಿನ್‌ಬರ್ಗ್ ಸ್ಕೂಲ್ ಆಫ್ ಮೆಡಿಸಿನ್‌ನ ಸಹಾಯಕ ಪ್ರೊ. ನಮ್ರತಾ ಕಂದೂಲ ತಿಳಿಸಿದ್ದಾರೆ.ವಿಶ್ವದ ಇತರೆ ದೇಶಗಳ ಜನರಿಗೆ ಹೋಲಿಸಿದರೆ ದಕ್ಷಿಣ ಏಷ್ಯಾ ದೇಶಗಳ ಮಹಿಳೆಯರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಅವರ ಅಹಾರ ಪದ್ಧತಿಯೂ ಕಾರಣ ಆಗಿರಬಹುದು ಎಂದು ಕಂದೂಲ ಅಭಿಪ್ರಾಯಪಟ್ಟಿದ್ದಾರೆ.ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ಜನರು ಸೇವಿಸುವ ಆಹಾರ ಉತ್ತಮವಾಗಿದೆ. ಆದರೆ ಅದನ್ನು ತಯಾರಿಸುವ ವಿಧಾನಗಳಿಂದಾಗಿಯೇ ಹೃದ್ರೋಗದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry