ಆಹಾರ ಹಣದುಬ್ಬರ ಇಳಿಕೆ

7

ಆಹಾರ ಹಣದುಬ್ಬರ ಇಳಿಕೆ

Published:
Updated:
ಆಹಾರ ಹಣದುಬ್ಬರ ಇಳಿಕೆ

ನವದೆಹಲಿ (ಪಿಟಿಐ): ನವೆಂಬರ್ 12ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು  ಶೇ 9.01ಕ್ಕೆ ಇಳಿದಿದೆ.ಆಲೂಗಡ್ಡೆ, ಈರುಳ್ಳಿ ಮತ್ತು ಗೋಧಿ ಹೊರತುಪಡಿಸಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆಗಳು ವಾರ್ಷಿಕ ನೆಲೆಯಲ್ಲಿ ಏರುಗತಿಯಲ್ಲಿದ್ದರೂ ಆಹಾರ ಹಣದುಬ್ಬರ ಒಂದಂಕಿಗೆ ಕುಸಿತ ಕಂಡಿದೆ. ಕಳೆದ 5 ವಾರಗಳಲ್ಲಿ ಇದೇ ಮೊದಲ ಬಾರಿಗೆ ಎರಡಂಕಿಯಿಂದ ಒಂದಂಕಿಗೆ ಇಳಿದಿದೆ. ಅಕ್ಟೋಬರ್ 8ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಎರಡಂಕಿಗೆ ಜಿಗಿದಿತ್ತು.ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿ ಅಳೆಯಲಾಗುವ ಆಹಾರ ಹಣದುಬ್ಬರವು ಹಿಂದಿನ ವಾರದಲ್ಲಿ ಶೇ 10.63ರಷ್ಟು ದಾಖಲಾಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಬೆಲೆ ಏರಿಕೆ ಮಟ್ಟವು ಶೇ 11.38ರಷ್ಟಿತ್ತು.ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಈರುಳ್ಳಿ ಶೇ 33ರಷ್ಟು, ಆಲೂಗಡ್ಡೆ ಶೇ 7 ಮತ್ತು ಗೋಧಿ ಶೇ 3ರಷ್ಟು ಅಗ್ಗವಾಗಿವೆ. ಇವುಗಳನ್ನು ಹೊರತುಪಡಿಸಿ ಇತರ ಎಲ್ಲ ಸರಕುಗಳ ಬೆಲೆಗಳು ವಾರ್ಷಿಕ ನೆಲೆಯಲ್ಲಿ ತುಟ್ಟಿಯಾಗಿವೆ.ತರಕಾರಿಗಳು ಶೇ 18, ಬೇಳೆಕಾಳು ಶೇ 14, ಹಾಲು ಶೇ 10, ಮೊಟ್ಟೆ, ಮಾಂಸ ಮತ್ತು ಮೀನು ಬೆಲೆ ಶೇ 12ರಷ್ಟು ಏರಿಕೆಯಾಗಿವೆ.ಆಹಾರೇತರ ಸರಕುಗಳಾದ ನಾರು, ತೈಲ ಬೀಜ ಮತ್ತು ಖನಿಜಗಳ ಹಣದುಬ್ಬರವು ಹಿಂದಿನ ವಾರದ ಶೇ 5.33ಕ್ಕೆ ಹೋಲಿಸಿದರೆ ಶೇ 4.05ಕ್ಕೆ ಇಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry