ಆಹಾರ ಹಣದುಬ್ಬರ ಗರಿಷ್ಠ ಮಟ್ಟಕ್ಕೆ

ಗುರುವಾರ , ಜೂಲೈ 18, 2019
28 °C

ಆಹಾರ ಹಣದುಬ್ಬರ ಗರಿಷ್ಠ ಮಟ್ಟಕ್ಕೆ

Published:
Updated:

ನವದೆಹಲಿ (ಪಿಟಿಐ): ಮೇ 28ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಶೇ 9.01ರಷ್ಟಾಗಿದ್ದು, ಕಳೆದ ಎರಡು ತಿಂಗಳಲ್ಲಿ ಮತ್ತೊಮ್ಮೆ  ಗರಿಷ್ಠ ಮಟ್ಟಕ್ಕೆ ಏರಿದೆ.



ಹಣದುಬ್ಬರ ದರ ತಗ್ಗಲಿದೆ ಎಂಬ ಸರ್ಕಾರದ ಅಂದಾಜಿಗೆ ವ್ಯತರಿಕ್ತವಾಗಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಕಂಡಿವೆ. ಹಣ್ಣು, ತರಕಾರಿ, ಈರುಳ್ಳಿ ಮತ್ತು ಪ್ರೊಟೀನ್‌ಯುಕ್ತ ಆಹಾರ ಪದಾರ್ಥಗಳ ದರಗಳು ಹೆಚ್ಚಿರುವುದು ಹಣದುಬ್ಬರ ದರ ಹೆಚ್ಚುವಂತೆ ಮಾಡಿವೆ. ಕಳೆದ ವಾರಾಂತ್ಯದಲ್ಲಿ ಹಣದುಬ್ಬರ ದರ ಶೇ 8.06ರಷ್ಟಿತ್ತು.



ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಆಹಾರ ಹಣದುಬ್ಬರ ದರ ಈ ಅವಧಿಯಲ್ಲಿ ಶೇ 8.06ರಷ್ಟಾಗಿದೆ.  ಕಳೆದ ವರ್ಷದ ಮೇ ತಿಂಗಳ ಕೊನೆಯ ವಾರದಲ್ಲಿ `ಡಬ್ಲ್ಯುಪಿಐ~ ಶೇ 20.62ರಷ್ಟಿತ್ತು.



ಕಳೆದ ಮಾರ್ಚ್ 26ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಶೇ 9.18ರಷ್ಟು ಏರಿಕೆ ಕಂಡಿದ್ದು, ಕಳೆದ ಎರಡು ತಿಂಗಳ ಗರಿಷ್ಠ ಮಟ್ಟವಾಗಿತ್ತು. ಹಣದುಬ್ಬರ ದರ ಮತ್ತೊಮ್ಮೆ ಏರಿರುವುದು ನಿರೀಕ್ಷಿತ ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು  ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



ಕಳೆದ ಎರಡು ತಿಂಗಳಲ್ಲಿ ಆಹಾರ ಪದಾರ್ಥಗಳ ದರಗಳು ಸರಾಸರಿ ಶೇ 8ರ ಆಸುಪಾಸಿನಲ್ಲಿವೆ. ಆದರೆ, ತೈಲ ಸೇರಿದಂತೆ ಇತರ  ಆಹಾರೇತರ ವಸ್ತುಗಳ ದರಗಳು ನಿರಂತರ ಏರಿಕೆ ಕಾಣುತ್ತಿರುವುದು ಹಣದುಬ್ಬರ ಒತ್ತಡ ಹೆಚ್ಚುವಂತೆ ಮಾಡಿವೆ. ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಈ ಅವಧಿಯಲ್ಲಿ ಹಣ್ಣುಗಳು ಶೇ 31ರಷ್ಟು ತುಟ್ಟಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ದರ ಶೆ 14ರಷ್ಟು ಹೆಚ್ಚಿದೆ. ಹಾಲು ಶೇ 8.49ರಷ್ಟು ಬೆಲೆ ಏರಿಕೆ ಕಂಡರೆ, ಮೊಟ್ಟೆ, ಮಾಂಸ, ಮೀನು ತುಸು ಅಗ್ಗವಾಗಿವೆ. ಬೇಳೆಕಾಳುಗಳ ಬೆಲೆಗಳೂ ಶೇ 6ರಷ್ಟು ಹೆಚ್ಚಿವೆ.



ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೊಗರಿ ಬೇಳೆ ದರ ಶೇ 10ರಷ್ಟು ಇಳಿಕೆ ಕಂಡಿದೆ. ಆಲೂಗಡ್ಡೆ ಮತ್ತು ಕೆಲವು ಆಯ್ದ ತರಕಾರಿ ದರಗಳು ಅಲ್ಪ ತಗ್ಗಿವೆ. ಸಗಟು ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರ ದರಕ್ಕೆ ಶೇ 20ರಷ್ಟು ಕೊಡುಗೆ ನೀಡುವ ಪ್ರಾಥಮಿಕ ಸರಕುಗಳ ದರಗಳು ಈ ಅವಧಿಯಲ್ಲಿ ಶೇ 11.52ರಷ್ಟಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry