ಆಹಾ ಎಷ್ಟೊಂದು ಅವಕಾಶ!

7

ಆಹಾ ಎಷ್ಟೊಂದು ಅವಕಾಶ!

Published:
Updated:
ಆಹಾ ಎಷ್ಟೊಂದು ಅವಕಾಶ!

ಈ ವರ್ಷ ನನ್ನ ಏಳು ಸಿನಿಮಾಗಳು ಬಿಡುಗಡೆಯಾಗಲಿವೆ. ಜತೆಗೆ ನನಗೆ ಈ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳು ಸಿಕ್ಕಿವೆ ಎಂದು ಖುಷಿಯಿಂದ ಕುಣಿದಾಡುತ್ತಿದ್ದಾರೆ ಬಾಲಿವುಡ್ ನಟಿ ದಿವ್ಯಾ ದತ್.ಭಾರತೀಯ ಚಿತ್ರರಂಗ 100 ವರ್ಷ ಪೂರೈಸುತ್ತಿದ್ದು ನಟಿಯರಿಗೆ ಒಳ್ಳೆಯ ಆದ್ಯತೆ ನೀಡುತ್ತಿದೆ ಎಂದು ಗುರುವಾರ `ಜಿಲಾ ಘಾಜಿಯಾಬಾದ್' ಸಿನಿಮಾದ ಪೂರ್ವಭಾವಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ದಿವ್ಯಾ, ತಮಗೆ ಸಿಕ್ಕಿದ ಅವಕಾಶವೇ ಎಲ್ಲರಿಗೂ ಸಿಗುತ್ತದೆ ಎಂದಲ್ಲ. ಆದರೆ ಈ ವರ್ಷವಂತೂ ಹೀರೋಯಿನ್‌ಗಳಿಗೆ ಎಂದಿಗಿಂತ ಅತ್ಯಧಿಕ ಪ್ರಮಾಣದ ಅವಕಾಶಗಳು ಕೈಬೀಸಿ ಕರೆಯುತ್ತಿರುವುದಂತೂ ಸುಳ್ಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಸಿನಿಮಾ ನಿರ್ದೇಶಕರು ಪಾತ್ರಗಳಿಗೆ ವಿಭಿನ್ನ ಸ್ವರೂಪ ನೀಡುತ್ತಿದ್ದಾರೆ. ಜತೆಗೆ ಹೊಸ ವಿಷಯಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದೂ ಅಲ್ಲದೇ ಈಗ ಪ್ರೇಕ್ಷಕ ವರ್ಗದವರು ಸಿನಿಮಾಗಳನ್ನು ಅರ್ಥೈಸಿಕೊಳ್ಳುವ ರೀತಿ ಆಶಾದಾಯಕವಾಗಿದೆ. ಹಾಗಾಗಿ ಒಳ್ಳೆಯ ಸಿನಿಮಾಗಳು ಬರುತ್ತಿವೆ ಎಂಬುದು, 35ರ ಹರೆಯದ ಈ ಸುಂದರಿಯ ಮೆಚ್ಚುಗೆಯ ನುಡಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry