ಭಾನುವಾರ, ಏಪ್ರಿಲ್ 11, 2021
20 °C

ಆಹಾ... ಸುಡುಗಲ್ಲ ಮೀನು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿನ್ನೆಲೆಯಲ್ಲಿ ಕೊಳಲಿನ ಸಂಗೀತ, ಮುದ ನೀಡುವ ತಂಗಾಳಿಯನ್ನು ಒಟ್ಟೊಟ್ಟಿಗೆ ಆಸ್ವಾದಿಸುತ್ತಾ ಕುಳಿತುಕೊಳ್ಳುವಷ್ಟರಲ್ಲಿ `ಲಾವಾ~ ಕಲ್ಲಿನ ಮೇಲೆ ಮೀನಿನ ತುಂಡುಗಳನ್ನು ಒಳಗೊಂಡ ತಟ್ಟೆಯನ್ನು ಸರ್ವರ್ ಟೇಬಲ್ ಬಳಿ ತಂದಿಟ್ಟ ಕೂಡಲೇ ಹೋಟೆಲ್‌ನ ವ್ಯವಸ್ಥಾಪಕ ಬಂದರು.`ಈ ಕಲ್ಲನ್ನು ಮುಟ್ಟಬೇಡಿ, 260 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿರುತ್ತದೆ. ಮೀನಿನ ತುಂಡನ್ನು ತೆಗೆದುಕೊಂಡು ಸಾಸ್‌ನಲ್ಲಿ ಅದ್ದಿ ತಿಂದು, ರುಚಿ ನೋಡಿ~ ಎಂದು ಎಚ್ಚರಿಕೆ ಮತ್ತು ಸಲಹೆಯ ಮಾತನ್ನಾಡಿದರು.ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಐಟಿಸಿ ವಿಂಡ್ಸರ್ ರೆಸ್ಟೋರೆಂಟ್‌ನ ರಾಜ್ ಪೆವಿಲಿಯನ್‌ನಲ್ಲಿ ನ.18ರವರೆಗೆ ಆಯೋಜಿಸಿರುವ ಫುಡ್ ಫೆಸ್ಟಿವಲ್ `ಸಿಜ್ಲಿಂಗ್ ಸಾಂಗ್ಸ್~ ಗ್ರಾಹಕರನ್ನು ಅತ್ತ ಸೆಳೆಯುತ್ತಿದೆ. ಹಾಗೆ ಬರುವ ಗ್ರಾಹಕರಿಗೆ ಊಟಕ್ಕೂ ಮುನ್ನ ಅವರು ಹಾಗೆ ಸಲಹೆ ನೀಡುತ್ತಲೇ ಇರುತ್ತಾರೆ. ವಿಶ್ವದ ವಿವಿಧ ರಾಷ್ಟ್ರಗಳ ಸೀ ಫುಡ್‌ನ ರುಚಿಯನ್ನು ಉಣಬಡಿಸುವ ಉದ್ದೇಶದಿಂದ ಈ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.`ಇಲ್ಲಿ ವಿದೇಶೀಯರು ಮಾತ್ರವಲ್ಲದೆ, ನಗರದ ಮಂದಿಯೂ ಹೆಚ್ಚಾಗಿ ಬರುತ್ತಿದ್ದಾರೆ. ಅದರಲ್ಲೂ ನಾರ್ವೆಜಿಯನ್ ಸಾಲ್ಮನ್ ತಿನಿಸನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇದು ನಾರ್ವೆಯ ಮೀನಿನ ಖಾದ್ಯ. ನಸುಗೆಂಪು ಬಣ್ಣದ ಮೀನಿನ ತುಂಡನ್ನು ಗ್ರಿಲ್ ಮಾಡಿದ ನಂತರ ಕಿನೊ ಆರೆಂಜ್ ಮತ್ತು ಫೆನೆಲ್ ಎಲೆಯನ್ನು ಕತ್ತರಿಸಿ ಹಾಕಲಾಗುತ್ತದೆ.ಜೊತೆಗೆ ಚೆರ‌್ರಿ, ಟೊಮೆಟೊ ಮತ್ತು ಕೇಫರ್  (ಹುಳಿ ರುಚಿ ನೀಡುವ ಸಣ್ಣ ಕಾಯಿ. ಇದನ್ನು ವಿನಿಗರ್ ಹಾಗೂ ಉಪ್ಪಿನಲ್ಲಿ ನೆನೆಹಾಕಲಾಗುತ್ತದೆ.) ಸಾಸ್ ಸಿದ್ಧಮಾಡಬೇಕು. ಇದನ್ನು ಲಾವಾ ಕಲ್ಲಿನಲ್ಲಿ ಎಲೆಕೋಸಿನ ದಳದ ಮೇಲೆ ಹಾಕಿದರೆ ನಾರ್ವೆಜಿಯನ್ ಸಾಲ್ಮನ್ ರೆಡಿ~ ಎಂದು ಮಾಹಿತಿ ನೀಡುತ್ತಾರೆ ಬಾಣಸಿಗ ಪ್ರಶಾಂತ್ ಜೋಸೆಫ್.`ಮಾಲ್ಡೀವ್ಸ್‌ನ ಕಪ್ಪೆಚಿಪ್ಪಿನ ಒಳಭಾಗದ ಮಾಂಸವನ್ನು ತೆಗೆದು ಬಿಯರ್‌ನಲ್ಲಿ ನೆನೆಸಲಾಗುತ್ತದೆ. ಅದಕ್ಕೆ ಲಿಂಬೆ ಸ್ವಾದ ಬರಲು ಒಂದಿಷ್ಟು ಕ್ಯಾಫರ್ ಎಲೆಯನ್ನು ಹಾಕಲಾಗುತ್ತದೆ. ಅದರಿಂದ ತೆಗೆದ ಮಾಂಸವನ್ನು ಬೇಯಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಅದುವೇ `ಸ್ಕ್ಯಾಲಪ್ಸ್~ ತಿನಿಸು ಎಂದು ವಿವರಣೆ ನೀಡುತ್ತಾರೆ ಪ್ರಶಾಂತ್.ಇವಿಷ್ಟೇ ಅಲ್ಲದೇ ಸೋಯಾ ಮತ್ತು ಶುಂಠಿ ಬೆರೆಸಿದ `ಯೆಲ್ಲೋ ಫಿನ್ ಟ್ಯೂನಾ~, ಮುಂಬೈನ ಸೊಲೊ ಮೀನು ಹಾಗೂ ಕೇರಳದ ಟೈಗರ್ ಪ್ರಾನ್ಸ್, ಗಟ್ಟಿ ಮೊಸರು ಮತ್ತು ಗುಲಿನ್ ಚಿಲ್ಲಿ ಹಾಕಿ ಮಾಡಿದ ಪಾಂಫ್ರೆಟ್ (ಮಾಂಜಿ) ಮೀನುಪ್ರಿಯರಿಗೆ ಇಷ್ಟವಾಗಲಿವೆ. ಮಸಾಲೆ ಕಡಿಮೆ ಇರುವ ಈ ಕಾಂಟಿನೆಂಟಲ್ ಆಹಾರ ಬೆಂಗಳೂರಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.ರಾತ್ರಿಯೂಟಕ್ಕೆ ಮಾತ್ರ ಈ ಆಹಾರ ವೈವಿಧ್ಯವನ್ನು ಸವಿಯಬಹುದು. ಆರಂಭದಲ್ಲಿ ನೀಡುವ ಇಟಲಿಯ ತರಕಾರಿ ಸೂಪ್ ಸವಿ ಇಷ್ಟವಾಗುತ್ತದೆ.

ಮಾಹಿತಿ, ಟೇಬಲ್ ಕಾಯ್ದಿರಿಸಲು: 4140 1205  ಹಾಗೂ itcwindsor@itchotels.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.