ಆಹ್ವಾನ ಸ್ವೀಕಾರ

ಗುರುವಾರ , ಜೂಲೈ 18, 2019
26 °C

ಆಹ್ವಾನ ಸ್ವೀಕಾರ

Published:
Updated:

ಲಂಡನ್ (ಪಿಟಿಐ): ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಪೀಠದ ಮುಖ್ಯಸ್ಥರಾಗಲು ಕೇಂಬ್ರಿಜ್‌ನ  ಖ್ಯಾತ ಅರ್ಥಶಾಸ್ತ್ರಜ್ಞ, ಭಾರತೀಯ ಮೂಲದ ಪ್ರೊ. ಅಜಿತ್ ಸಿಂಗ್ ಸಮ್ಮತಿಸಿದ್ದಾರೆ.`ಮನಮೋಹನ್ ಸಿಂಗ್ ಅಧ್ಯಯನ ಪೀಠ~ದ ಮುಖ್ಯಸ್ಥರಾಗುವಂತೆ ಪಂಜಾಬ್ ವಿವಿಯು ಮೇ ತಿಂಗಳಲ್ಲಿ ಅಜಿತ್ ಸಿಂಗ್ ಅವರಿಗೆ ಕೇಳಿಕೊಂಡಿತ್ತು. ಪ್ರೊ. ಸಿಂಗ್ ಅವರು ಈಗ ಅಧಿಕೃತವಾಗಿ ಆಹ್ವಾನವನ್ನು ಸ್ವೀಕರಿಸಿದ್ದಾರೆ.`ಇದೊಂದು ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. ಮನಮೋಹನ್ ಸಿಂಗ್ ಅವರು  ಅತ್ಯುತ್ತಮ ಗುಣಗಳನ್ನು ಹೊಂದಿದ್ದಾರೆ. ಮಾತ್ರವಲ್ಲದೇ, ನಾನು ಪಂಜಾಬ್ ವಿವಿಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಲು ಆರಂಭಿಸಿದಾಗ ಅವರು ನನ್ನ ಬೋಧಕರಾಗಿದ್ದರು~ ಎಂದು ಅಜಿತ್ ಸಿಂಗ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry